ಕೊಯ್ಯೂರು: “ಮಾನಸಿಕ ಮತ್ತು ದೈಹಿಕ ದೃಢತೆಯನ್ನು ಕಾಯ್ದುಕೊಳ್ಳಲು ಯೋಗ ಅತ್ಯಂತ ಅವಶ್ಯಕವಾದುದು ” ಎಂಬುದಾಗಿ ಕೊಯ್ಯೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ತಚ್ಛಮೆ ಅಭಿಪ್ರಾಯಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನದ ಉದ್ಘಾಟನೆಗೈದು ಯೋಗವನ್ನು ವಿದ್ಯಾರ್ಥಿಗಳು ನಿತ್ಯ ಜೀವನ ದಲ್ಲಿ ನಿರಂತರ ವಾಗಿ ನಡೆಸಿದಾಗ ರೋಗಮುಕ್ತ ಸಮಾಜದ ನಿರ್ಮಾಣ ಮಾಡಲು ಸಾಧ್ಯ ವಾಗುತ್ತದೆ ಎಂದರು.

ವೇದಿಕೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೋಗ ತರಬೇತುದಾರರಾದ ಎಸ್. ಡಿ. ಎಂ ಪ್ರಕೃತಿ ಮತ್ತು ಯೋಗವಿಜ್ಞಾನ ಕಾಲೇಜ್ ನ ಅಭಿಜ್ಞ ವಿ. ಎಂ. ವಿದ್ಯಾರ್ಥಿಗಳಿಗೆ ಯೋಗಾ ಭ್ಯಾಸವನ್ನು ನಡೆಸಿಕೊಟ್ಟರು. ಕಾಲೇಜ್ ನ ಎಲ್ಲಾ ವಿದ್ಯಾರ್ಥಿಗಳು ಯೋಗ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ವಿನಯ, ವಂಶಿಕ, ಐಶ್ವರ್ಯ, ಚಿರಸ್ವಿ, ಸೌಜನ್ಯ, ಫಾತಿಮತ್ ಸಹಲ, ವಿದ್ಯಾ ಪ್ರಾರ್ಥನೆ ಗೈದರು ಮತ್ತು ಯೋಗಗೀತೆಯನ್ನು ಹಾಡಿದರು. ರಾಜ್ಯ ಶಾಸ್ತ್ರ ಉಪನ್ಯಾಸಕ ಸಂತೋಷ್ ಕುಮಾರ್ ಸಹಕರಿಸಿದರು. ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಭವ್ಯ ಸ್ವಾಗತಿಸಿ, ಪವಿತ್ರ ವಂದಿಸಿದರು.