ಧರ್ಮಸ್ಥಳ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ

0

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಯೋಗ ಸಪ್ತಾಹ ಸಮಾರೋಪ ಸಮಾರಂಭ ಶಾಲಾ ಕ್ರೀಡಾ ಸಂಘ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಹಾಗೂ ಕಬ್ ಮತ್ತು ಬುಲ್ ಬುಲ್ ಹಾಗೂ ಬನ್ನಿಸ್ ಇದರ ಜಂಟಿ ಆಶಯದೊಂದಿಗೆ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆಯ ವಿದ್ಯಾರ್ಥಿನಿಯರಾದ ಸಾನಿಧ್ಯ ಹಾಗೂ ಅನನ್ಯ ಆಗಮಿಸಿ ವಾರವಿಡೀ ವಿದ್ಯಾರ್ಥಿಗಳಿಗೆ ಯೋಗ ತರಬೇತು ನೀಡಿದ್ದು ಅವರು ವಾರವಿಡೀ ಹೇಳಿಕೊಟ್ಟ ಯೋಗದ ವಿವಿಧ ಆಸನಗಳನ್ನು ಮಾಡುವುದರ ಮೂಲಕ ಸಮಾರೋಪ ಸಮಾರಂಭವನ್ನು ಸಮಾಪ್ತಿಗೊಳಿಸಿದರು.

ಭಾರತ ಸ್ಕೌಟ್ ಗೈಡ್ ನ ವಿದ್ಯಾರ್ಥಿಗಳು ಬನ್ನಿ ಹಾಗೂ ಕಬ್ ಮತ್ತು ಬುಲ್ ಬುಲ್ ಗಳಿಗೆ ತಾವು ಕಲಿತಂತಹ ಆಸನಗಳ ತರಬೇತಿಯನ್ನು ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ. ವಿ.ಇವರ ಮಾರ್ಗದರ್ಶನದಲ್ಲಿ ಶಾಲಾ ಕ್ರೀಡಾ ಸಂಘದ ಮಾರ್ಗದರ್ಶಕ ಸಂತೋಷ್ ಇವರ ಸಹಾಯದೊಂದಿಗೆ ಯೋಗ ದಿನಾಚರಣೆ ಸಂಪನ್ನಗೊಂಡಿತು. ಶಾಲಾ ಶಿಕ್ಷಕ ವೃಂದ, ಕಬ್ ಬುಲ್ ಬುಲ್ ಹಾಗೂ ಸ್ಕೌಟ್ ಹಾಗೂ ಗೈಡ್ ಇದರ ಜವಾಬ್ದಾರಿ ಹೊತ್ತ ಶಿಕ್ಷಕರು ಭಾಗವಹಿಸಿದ್ದರು. ಸ್ಕೌಟ್ ಮಾಸ್ಟರ್ ಆಶಾ ಕುಮಾರಿ ಅತಿಥಿಗಳಿಗೆ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here