ಉಜಿರೆ: ಜೂ.21ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ)ಯಲ್ಲಿ ವಿಶ್ವ ಸಂಗೀತ ದಿನದ ಅಂಗವಾಗಿ ‘ಮೋಹನ ರಾಗ ತರಂಗ’ ಶೀರ್ಷಿಕೆಯಲ್ಲಿ ಆಯೋಜಿಸಿದ್ದ ವಿಶ್ವ ಸಂಗೀತ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸ್ವಸ್ತಿಶ್ರೀ ವಿಶ್ವ ಸಂಗೀತ ದಿನದ ಮಹತ್ವ ತಿಳಿಸಿ, ವಿದ್ಯಾರ್ಥಿಗಳ ತಂಡದಿಂದ ಮೋಹನ ರಾಗದಲ್ಲಿ ಸಂಯೋಜನೆಗೊಂಡ ಗಾಯನ ಸಂಗೀತದ ವಿವಿಧ ಪ್ರಕಾರಗಳಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಭಜನೆ ಹಾಗೂ ಚಲನಚಿತ್ರ ಗೀತೆಗಳನ್ನು ಹಾಡಲಾಯಿತು.
ಶಾಲಾ ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ಶಿಕ್ಷಕಿ ಸುಮಾ ಶ್ರೀನಾಥ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಮನ್ಮೋಹಕ್ ನಾಯ್ಕ್ ಕೆ.ಜಿ ಅಧ್ಯಕ್ಷತೆಯನ್ನು ವಹಿಸಿದ್ದರು.