ಬೆಳ್ತಂಗಡಿ: ಎಲ್ ಐ ಸಿ ಶಾಖೆಗೆ ವಿಭಾಗಾಧಿಕಾರಿ ಜಿ.ಎನ್.ಭಟ್ ಭೇಟಿ – ಸಾಧಕ ಪ್ರತಿನಿಧಿಗಳಿಗೆ ಗೌರವ

1

ಬೆಳ್ತಂಗಡಿ: ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಗೆ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಜಿ.ಎನ್.ಭಟ್ ಜೂ.17ರಂದು ಭೇಟಿ ನೀಡಿ ಪ್ರತಿನಿಧಿಗಳ ಸಭೆಯಲ್ಲಿ ಹೊಸ ವ್ಯವಹಾರದ ಕುರಿತು ಮಾಹಿತಿ ನೀಡಿ 2024- 25ನೇ ಸಾಲಿನಲ್ಲಿ ವಿಮಾ ವ್ಯವಹಾರದಲ್ಲಿ ಸಾಧನೆ ಗೈದ ಪ್ರತಿನಿಧಿಗಳನ್ನು ಗೌರವಿಸಿದರು.

ಉಡುಪಿ ವಿಭಾಗದ ಮಾರ್ಕೆಟಿಂಗ್ ಮೆನೇಜರ್ ಬಿಜು ಜೋಸೆಫ್, ಬಂಟ್ವಾಳ ಶಾಖೆಯ ಮುಖ್ಯ ಪ್ರಬಂಧಕ ಸತೀಶ್ ಕುಮಾರ್, ಹಿರಿಯ ಶಾಖಾಧಿಕಾರಿ ಗುರುದತ್ತ ನಾಯಕ್ ಸಭೆಯಲ್ಲಿ ಭಾಗವಹಿಸಿ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಬೆಳ್ತಂಗಡಿ ಉಪಗ್ರಹ ಶಾಖೆಯ ಶಾಖಾ ಧಿಕಾರಿ ಪ್ರಕಾಶ್ ಕೆ. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿ.ಶೆಟ್ಟಿ, ಉದಯ ಶಂಕರ್, ವಿನಯ ಕುಮಾರ್, ಸಂದೀಪ್ ಅರಮನೆ, ಮುಖ್ಯ ಸಲಹೆಗಾರರು, ಸಲಹೆಗಾರರು, ಹಾಜರಿದ್ದರು.

ಅಭಿವೃದ್ಧಿ ಅಧಿಕಾರಿ ಟಿ.ಡಿ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿ ಮುಖ್ಯ ಸಲಹೆಗಾರ ಎ. ಎಸ್. ಲೋಕೇಶ್ ಶೆಟ್ಟಿ ವಂದಿಸಿದರು.

1 COMMENT

LEAVE A REPLY

Please enter your comment!
Please enter your name here