ಶಿಬಾಜೆ: ಪೆರ್ಲ ಸ. ಉ. ಹಿ. ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

0

ಶಿಬಾಜೆ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೆರ್ಲ ದಲ್ಲಿ ಶಾಲಾ ಸಂಸತ್ ಚುನಾವಣೆ ಜೂ. 13ರಂದು ನಡೆಯಿತು. ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಪ್ರೇಕ್ಷಾ, ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಸ್ವಸ್ತಿಕ್ ಆಯ್ಕೆಯಾದರು. ಶಾಲಾ ಸಂಸತ್ತಿನ ಅಧ್ಯಕ್ಷರಾಗಿ 7ನೇ ತರಗತಿಯ ತನ್ಮಯ್, ವಿರೋಧ ಪಕ್ಷದ ನಾಯಕ 7ನೇ ತರಗತಿಯ ಅಶ್ವತ್ ಕುಮಾರ್ ಆಯ್ಕೆಯಾದರು. 6ನೇ ತರಗತಿಯ ಕೌಶಿಕ್ ಮತ್ತು ಯಶ್ವಿನ್ -ತೋಟಗಾರಿಕಾ ಮಂತ್ರಿ, ಅಶ್ವಿತಾ ಮತ್ತು ಗಾಯನ ಸಾಂಸ್ಕೃತಿಕ ಮಂತ್ರಿ, 7ನೇ ತರಗತಿಯ ಕೀರ್ತಿಕಾ ಮತ್ತು 5ನೇ ತರಗತಿಯ ಸುವೀಕ್ಷಾ ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿ, 7ನೇ ತರಗತಿಯ ಮೋಕ್ಷ ಮತ್ತು 6ನೇ ತರಗತಿಯ ಗೌತಮಿ ಗ್ರಂಥಾಲಯ ಮತ್ತು ವಿದ್ಯಾ ಮಂತ್ರಿ, 6ನೇ ತರಗತಿಯ ಪ್ರಖ್ಯಾತ್ ಮತ್ತು ಜೋಶ್ವ ಜಯಕುಮಾರ್ ಕ್ರೀಡಾ ಮಂತ್ರಿ, 5ನೇ ತರಗತಿಯ ಕೌಶಿಕ್ ಮತ್ತು ಪ್ರಣಾಮ್ ನೀರಾವರಿ ಮಂತ್ರಿಯಾಗಿ ಆಯ್ಕೆಯಾದರು.

ಇವರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಉಷಾ ವಿ. ಪ್ರಮಾಣ ವಚನ ಬೋಧಿಸಿದರು. ಶಾಲಾ ಸಹ ಶಿಕ್ಷಕರಾದ ಮಂಜುನಾಥ ಎಂ. ಎಸ್., ಮಧುಶ್ರೀ ಕೆ. ಹಾಗೂ ಲೋಲಕ್ಷಿ ಎಸ್. ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here