
ಧರ್ಮಸ್ಥಳ: ಸಮೀಪದ ಬೊಳಿಯಾರಿನಲ್ಲಿ ಕಾಡಾನೆ ರಿಕ್ಷಾ ಮೇಲೆ ದಾಳಿ ಜೂ.6ರಂದು ಬೆಳಗಿನ ಜಾವ ಮಾಡಿದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂ ಆದ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜು ಟಿ.ಎನ್. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಯಿಂದ ಸಿಗುವ ಪರಿಹಾರ ಒದಗಿಸುವ ಕುರಿತು ಭರವಸೆ ನೀಡಿದರು.
ಡಿ.ಆರ್.ಎಫ್.ಒ ಕಮಲಾ, ರಿಕ್ಷಾ ಮಾಲೀಕ ದಿನೇಶ್ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.