ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿಂದು ಈದುಲ್ ಅದ್ ಹಾ ನಮಾಝ್ ಖತೀಬರಾದ ಎಫ್.ಹೆಚ್. ಮಹಮದ್ ಮಿಸ್ಬಾಹಿ ಅಲ್-ಫುರ್ಖಾನಿ ನೇತೃತ್ವದಲ್ಲಿ ನಡೆದು ಇಡೀ ಜಗತ್ತಿಗೆ ಶಾಂತಿಯನ್ನು ಸಾರಿದ ಇಸ್ಲಾಮ್ ಧರ್ಮದ ಬಗ್ಗೆ ಸಂದೇಶ ಭಾಷಣ ಮಾಡಿದರು. ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಸಮಿತಿ ಪದಾಧಿಕಾರಿಗಳು, ಸದರ್ ಸಿದ್ದೀಕ್ ಮುಈನಿ, ಇಲ್ಯಾಸ್ ಮದನಿ, ಕೆ. ಎಮ್.ಜೆ., ಸ್ವಲಾತ್ ಸಮಿತಿ, ಎಸ್.ವೈ.ಎಸ್., ಎಸ್.ಎಸ್.ಎಫ್ ಸಮಿತಿಗಳ ಪದಾಧಿಕಾರಿಗಳು ಹಾಗೂ ಜಮಾಅತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.