ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯನ್ನುಪ್ರಾರ್ಥನಾ ವಿಧಿಯೊಂದಿಗೆ ಶಾಲಾ ಸಭಾಂಗಣದಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳಾದ ಅನ್ವಿಲ್ ಡೇಸ ಮತ್ತು ಮೆಲೀಶಾ ಡಿಸೋಜಾ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು.
ವಿದ್ಯಾರ್ಥಿಗಳು ಹಾಡು, ನೃತ್ಯ ಮತ್ತು ಕಿರು ನಾಟಕವನ್ನು ಅಭಿನಯಿಸುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಿದರು. ಪರಿಸರ ಸಂರಕ್ಷಣೆಗೆ ಸಂಬಂಧಪಟ್ಟ ಹಲವು ಘೋಷಣೆಗಳನ್ನು ಕೂಗಿ ಪರಿಸರದ ಮಹತ್ವವನ್ನು ಬಿತ್ತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರಾರವರು ಆಗಮಿಸಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನಾವು ಪರಿಸರವನ್ನು ಸಂರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿ ವಿಶ್ವ ಪರಿಸರ ದಿನದ ಶುಭಾಶಯವನ್ನು ಕೋರಿದರು.

ಪುಂಜಾಲಕಟ್ಟೆ ವಲಯದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚೇತನಾರವರು ಆಗಮಿಸಿ ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ನಾವು ಇವತ್ತು ಮಾಡುವ ಪರಿಸರ ದಿನ ಆಚರಣೆ ಒಂದು ದಿನದ ಆಚರಣೆ ಆಗಬಾರದು, ಇದನ್ನು ನಾವು ನಮ್ಮ ಬದುಕಿನಲ್ಲಿ ಪಾಲಿಸಬೇಕೆಂದು ಹೇಳಿ ವಿಶ್ವ ಪರಿಸರ ದಿನದ ಶುಭಾಶಯವನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸ್ವಾ| ದೀಪಕ್ ಲಿಯೊ ಡೇಸ ಉಪಸ್ಥಿತರಿದ್ದರು. ವಿಶ್ಮಿತಾ ಪ್ರಭುರವರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪ್ರಿನ್ಸಿಯ ಕಾರ್ಲ್ ನಿರೂಪಿಸಿ, ಪವನ್ ನಾಯಕ್ ಧನ್ಯವಾದಗಳನ್ನು ಸಮರ್ಪಿಸಿದರು.