ಬೆಳ್ತಂಗಡಿ: ಅಳದಂಗಡಿ ಕುದ್ಯಾಡಿ ನಿವಾಸಿ ಶಿವಯ್ಯ ಪೂಜಾರಿ (ವ.48) ಅಲ್ಪಕಾಲದ ಅನಾರೋಗ್ಯದಿಂದ ಜೂ.4ರಂದು ನಿಧನ ಹೊಂದಿದ್ದಾರೆ. ಇವರು ಬಳಂಜದ ಹಿರಿಯ ಆಟೋ ಚಾಲಕರಾಗಿ, ರಿಕ್ಷಾ ಚಾಲಕ ಮಾಲಕ ಸಂಘದಲ್ಲಿ ಸಕ್ರಿಯ ಹುದ್ದೆಯನ್ನು ಅಲಂಕರಿಸಿದ್ದರು. ಮೃತರು ಪತ್ನಿ ಶಶಿಕಲಾ, ಮಕ್ಕಳಾದ ಸೃಜನ್, ಶರಣ್ಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.