ಧರ್ಮಸ್ಥಳ: ಧರ್ಮಸ್ಥಳ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯ ದ ಉದ್ಘಾಟನೆ ಜೂ. 3ರಂದು ನಡೆಯಿತು.
ವೇದಿಕೆಯಲ್ಲಿ ರಾಜ್ಯಮಟ್ಟದಲ್ಲಿ ಶಾಸ್ತ್ರೀಯ ನೃತ್ಯದ ದ್ವಿತೀಯ ಬಹುಮಾನವನ್ನು ಗಳಿಸಿರುವ ಹಂಸಿನಿ ಭೀಡೆ ಮುಖ್ಯ ಅತಿಥಿಯಾಗಿ ಮಕ್ಕಳನ್ನು ಉದ್ದೇಶಿಸಿ ಶುಭ ಕೋರಿ ಸಂಗೀತ ಹಾಗೂ ನೃತ್ಯವು ಹೇಗೆ ಮಕ್ಕಳ ವಿಕಸನಕ್ಕೆ ಸಹಕಾರಿಯಾಗುವುದು ಎನ್ನುವುದನ್ನು ಸುಂದರವಾಗಿ ವಿವರಿಸಿದರು.
ವೇದಿಕೆಯಲ್ಲಿ ಶಾಲಾ ಶಿಕ್ಷಕಿ ರಮಾ ರಾಜೇಶ್, ಸಂಗೀತ ಶಿಕ್ಷಕಿ ವಿದುಷಿ, ಸುಗುಣ, ನೃತ್ಯ ಶಿಕ್ಷಕಿ ವಿದುಷಿ ವಿದ್ಯಾಶ್ರೀ ಟೋಸರೆ, ಸಂಗೀತ ಹಾಗೂ ನೃತ್ಯದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಅಮೃತ.ವಿ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಮಾನ್ಯ 6ನೇ ತರಗತಿ ನಡೆಸಿಕೊಟ್ಟರು.
ಹಾಗೆಯೇ ಸ್ವಾಗತವನ್ನು ಪೂರ್ಣಶ್ರೀ 5ನೇ ತರಗತಿ, ಅತಿಥಿ ಪರಿಚಯವನ್ನು ತನ್ನಿ 5ನೇ ತರಗತಿ, ಧನ್ಯವಾದವನ್ನು ರಿಷಿಕಾ 5ನೇ ತರಗತಿ ನೆರವೇರಿಸಿದರು.