ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಶೋ ನಮನ ಕಾರ್ಯಕ್ರಮ

0

ಧರ್ಮಸ್ಥಳ: ಶ್ರೀ ಧ. ಮಂ.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಾ.ಬಿ.ಯಶೋವರ್ಮ ಅವರ ಸಂಸ್ಮರಣಾರ್ಥ ಯಶೋನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಾ. ಬಿ ಯಶೋವರ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಅರ್ಪಿಸಲಾಯಿತು. ಆ ಬಳಿಕ ಶಾಲಾ ಸಹ ಶಿಕ್ಷಕಿ ರಮಾ ರಾಜೇಶ್‌, ಡಾ. ಬಿ. ಯಶೋವರ್ಮ ಅವರ ಕಾರ್ಯ ವೈಖರಿಯ ಕುರಿತು ಹಾಗೂ ಅವರ ಜೀವನ ಶೈಲಿಯ ಕುರಿತು ಮಾತನಾಡಿದರು. ಅವರ‌ ಕುರಿತಾದ ಪುಸ್ತಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಶಾಲಾ ಮುಖ್ಯೋಪಾಧ್ಯಾಯನಿ ಪರಿಮಳ ಎಂ. ವಿ. ನೇತೃತ್ವದಲ್ಲಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಶಾಲೆಯ ಹತ್ತನೇ‌ ತರಗತಿ ವಿದ್ಯಾರ್ಥಿಗಳು, ಶಾಲಾ ಅಧ್ಯಾಪಕ ವೃಂದ‌ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here