ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ 2020-2021ನೇ ಸಾಲಿನ ರಾಜ್ಯ ಹಣಕಾಸು ಯೋಜನೆಯ ಬೆಳ್ತಂಗಡಿ ತಾಲೂಕು ಪಂಚಾಯಿತಿನಿಂದ ಅನುಷ್ಠಾನಗೊಂಡ ಎರಡು ಮಂದಿ ವಿಕಲಚೇತನ ಫಲಾನುಭವಿಗಳ ಮನೆಯ ದುರಸ್ತಿಯ ಕಾಮಗಾರಿಯು ನಡೆಯದೇ ಅದರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ಭಾರಿ ಅವ್ಯವಹಾರ ನಡೆದಿದೆ ಎಂಬುದಾಗಿ ಮೇ. 21ರಂದು ನಡೆದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಪ್ರಸ್ತಾಪವಾಗಿದ್ದು, ಸಾಮಾಜಿಕ ಪರಿಶೋಧನೆ ತಂಡವು ಕೂಡಾ ದೃಢಪಡಿಸಿದೆ.
ಇದಕ್ಕೂ ಮಾಲಾಡಿ ಗ್ರಾಮ ಪಂಚಾಯಿತಿಗೆ ಯಾವುದೇ ಸಂಬಂಧವಿರುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆಯಾಗಿ ಫಲಾನುಭವಿಗಳಿಗೆ ನ್ಯಾಯ ದೊರಕಬೇಕು ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬುದಾಗಿ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಸ್ಪಷ್ಟನೆ ನೀಡುದ್ದಾರೆ.