ಕರಾಯ: ಶ್ರೀ ಕೃಷ್ಣ ಭಜನಾ ಮಂದಿರ ಕರಾಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಣ್ಣೀರುಪಂತ ವಲಯ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಮಕ್ಕಳಿಗೆ ಒಂದು ವಾರದ ಕುಣಿತ ಭಜನಾ ತರಬೇತಿಯನ್ನು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನ ಕರಾಯದ ಆಡಳಿತ ಮೊಕ್ತೇಸರ ಅನಂತಕೃಷ್ಣ ಕುದ್ದನಾಯ ದೀಪ ಪ್ರಜ್ವಲನೆ ಮಾಡುವುದರ ಮುಖಾಂತರ ಉದ್ಘಾಟಿಸಿ, ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ನಿವೃತ ಸರ್ಕಲ್ ಇನ್ಸ್ ಪೆಕ್ಟರ್ ಆದ ಸುದರ್ಶನ್ ಕೊಲ್ಲಿ ಮಾತಾನಾಡುತ್ತ ಹಿಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಭಜನೆ ನಡೆಯುತ್ತ ಇತ್ತು. ಆದ್ರೆ ಇಂದಿನ ಕಾಲದಲ್ಲಿ ಭಜನೆ ಮಾಡುವ ಮನೆಗಳು ಸಿಗುವುದು ಬಹಳ ವಿರಳ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಯದ ಶ್ರೀ ಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ ಶೆಟ್ಟಿ ಮೈರ, ಮಾತಾಡಿ ಭಜನೆ ಮಾಡಿದಲ್ಲಿ ವಿಭಜನೆ ಇಲ್ಲ ಎಂಬ ಸಂದೇಶವನ್ನು ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಶೋಕ್ ಹಿರಿಯ ಗೋಪಾಲಕೃಷ್ಣ ಪೈ, ಭಜನಾ ಪರಿಷತ್ ನ ಸಮನ್ವಯಧಿಕಾರಿ ಸಂತೋಷ್ ಪಿ. ಅಳಿಯೂರು ಭಜನಾ ತರಬೇತುದಾರ ಆಕಾಶ್ ಹಾಗೂ ಭಜನಾ ಪರಿಷತ್ ಪದಾಧಿಕಾರಿಗಳು ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಯುವರಾಜ್ ನಿರೂಪಿಸಿದರು. ಮೇಲ್ವಿಚಾರಕ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ರಾಜಶೇಖರ್ ರೈ ವಂದಿಸಿದರು.