ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಆತಿಥ್ಯದಲ್ಲಿ ಪ್ರಾದೇಶಿಕ ರಕ್ತಪೂರಣ ಕೇಂದ್ರ ಜಿಲ್ಲಾ ಆಸ್ಪತ್ರೆ ವೆನ್ಲಾಕ್ ಮಂಗಳೂರು ಇವರ ಸಹಯೊಗದೊಂದಿಗೆ ತಾಲೂಕು ಔಷದ ವ್ಯಾಪಾರಸ್ಥರ ಸಂಘ ಬೆಳ್ತಂಗಡಿ, ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಆಟೋರಿಕ್ಷಾ ಚಾಲಕ ಮಾಲಕರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಮೇ. 24ರಂದು ಬೆಳಗ್ಗೆ 9ರಿಂದ ಬೆಳ್ತಂಗಡಿಯ ಜೆಸಿ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಬಂದು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬೇಕು. ಅದೇ ರೀತಿ ರಕ್ತ ನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಇದ್ದು, ಅಗತ್ಯ ಸಂದರ್ಭಗಳಲ್ಲಿ ರೋಗಿಗಳಿಗೆ ತಕ್ಕ ಸಮಯದಲ್ಲಿ ರಕ್ತ ಮರುಪೂರಣ ಆಗುವಂತೆ ಸಾರ್ವಜನಿಕ ಸಹೃದಯ ಬಂಧುಗಳು ಸಹಕರಿಸಬೇಕು ಎಂದು ಎಲ್ಲಾ ಸಂಘಗಳ ಅಧ್ಯಕ್ಷರ ಜೊತೆಯಾಗಿ ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.