ಕೊಕ್ಕಡ: ಶಾರ್ಟ್ ಸರ್ಕ್ಯೂಟ್ ನಿಂದ ಕೊಕ್ಕಡ ಹೃದಯಭಾಗದ ಉರುಳಿ ಮಜಲ್ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಸೌತಡ್ಕ ಜ್ಯೂಸ್ ಅಂಡ್ ಚಾಟ್ಸ್ ಅಂಗಡಿ ಸಂಪೂರ್ಣ ಭಸ್ಮವಾಗಿದ್ದು, ಈ ಘಟನೆ
ಮೇ. 20ರಂದು ರಾತ್ರಿ ನಡೆದಿರುವುದಾಗಿ ಅಂಗಡಿ ಮಾಲಕ ಗಣೇಶ್ ಪಾಂಗಳ ತಿಳಿಸಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿಯಲ್ಲಿದ್ದ ಫ್ರಿಜ್, ಕೂಲರ್, ಒವನ್ ಇನ್ನಿತರ ದಿನಬಳಕೆ ಎಲೆಕ್ಟ್ರಿಕಲ್ ವಸ್ತುಗಳು, ವಾಟರ್ ಬಾಟಲ್, ಮಿಕ್ಸಿ, ಅಂಗಡಿಯಲ್ಲಿ ಶೇಖರಿಸಿದ್ದ ರೂ 5ಲಕ್ಷ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಮಾಲಕ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.