ಬೆಳ್ತಂಗಡಿ: ಮಂಗಳೂರು ಇನ್ಸಿಟ್ಯೂಟ್ ಆಫ್ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ (MIFSE) ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಇವರ ಸಂಯೋಜನೆಯಲ್ಲಿ ವೃತ್ತಿಪರ ಮತ್ತು ಪ್ರೊಪೆಷನಲ್ ಡಿಪ್ಲೋಮಾ, ಪಿಜಿ ಕೋರ್ಸ್ ಆರಂಭವಾಗುತ್ತಿದೆ. ಕೇಂದ್ರ ಸರ್ಕಾರದ ಅಂಗೀಕೃತ ಎನ್. ಎಸ್. ಡಿ. ಸಿ ಪ್ರಮಾಣಪತ್ರದೊಂದಿಗೆ ಮಂಗಳೂರು ವಿವಿ ಮಾನ್ಯತೆ ಹೊಂದಿರುವ ಕೋರ್ಸ್ ಗಳ ಬಗ್ಗೆ, ಉದ್ಯೋಗವಕಾಶ, ತರಬೇತಿ ಹೇಗೆ ಅನ್ನುವುದರ ಕುರಿತಾಗಿ ಬೆಳ್ತಂಗಡಿ ಜನತೆಗೆ ಮಾಹಿತಿ ನೀಡುವ ತಾಲೂಕಿನಾದ್ಯಂತ ಸಂಚರಿಸುವ ವಾಹನಕ್ಕೆ ಮೇ. 12ರಂದು ಚಾರ್ಮಾಡಿಯಲ್ಲಿ ಚಾಲನೆ ನೀಡಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆಪತ್ಭಾಂಧವ ಖ್ಯಾತಿಯ ಚಾರ್ಮಾಡಿ ಹಸನಬ್ಬ ಮಾಹಿತಿ ವಾಹನ ಸಂಚಾರಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಹಸನಬ್ಬ “ಇಂತಹ ತರಬೇತಿ ಸಂಸ್ಥೆಗಳು ಗ್ರಾಮೀಣ ಯುವಕರಿಗೆ ಹೊಸ ದಿಕ್ಕು ತೋರಿಸುತ್ತವೆ. ಪ್ರಸಕ್ತ ಸನ್ನಿವೇಶದಲ್ಲಿ ಪ್ರೊಫೆಷನಲ್ ಕೋರ್ಸ್ ಗಳು ಅತೀ ಅಗತ್ಯ ಇಂತಹ ಸೇವೆಗಳನ್ನು ನೀಡುವ ಎಂ. ಜಿ. ತಲ್ಲತ್ ಸವಣಾಲು ಇವರು ಮತ್ತು ಇವರ ತಂಡದ ಸೇವೆ ಶ್ಲಾಘನೀಯ” ಎಂದು ಮೆಚ್ಚುಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಎಂ. ಜಿ. ತಲ್ಲತ್ ಸವಣಾಲು, ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಮುಹಮ್ಮದ್ ತೌಸೀಫ್ ಕಕ್ಕಿಂಜೆ, ಮುಹಮ್ಮದ್ ಅಝಾನ್ ಕಕ್ಕಿಂಜೆ, ಉದ್ಯಮಿ ಯುರೋಪ್ ಜಾರ್ಜ, ಸುಪ್ರೀಮ್ ಎಲೆಕ್ಟ್ರಾನಿಕ್ಸ್ ಗುರುವಾಯನಕೆರೆ ಇದರ ಉನೈಸ್ ಸುಪ್ರೀಮ್ ಉಪಸ್ಥಿತರಿದ್ದರು.
ಇದೇ ವೇಳೆ ಉದ್ಘಾಟನಾ ಕೊಡುಗೆಯಡಿಯಲ್ಲಿ ಕೆಲವು ಕೋರ್ಸ್‌ಗಳಿಗೆ ವಿಶೇಷ ರಿಯಾಯಿತಿ ಘೋಷಿಸಲಾಯಿತು. ಅನುಗ್ರಹ ಟ್ರೈನಿಂಗ್ ಕಾಲೇಜು ಸಾವಿರಾರು ಯುವಕರಿಗೆ ಉಚಿತ ಮತ್ತು ಕಡಿಮೆ ಶುಲ್ಕದಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತಿರುವ ಸಂಸ್ಥೆಯಾಗಿದ್ದು, ಇದರ ಸೇವೆಗಳು ರಾಜ್ಯದಾದ್ಯಂತ ಪ್ರಭಾವ ಬೀರುತ್ತಿವೆ.ಆಸಕ್ತ ವಿದ್ಯಾರ್ಥಿಗಳು ದಾಖಲಾತಿಗೆ ಅನುಗ್ರಹ ಟ್ರೈನಿಂಗ್ ಕಾಲೇಜು, ಶ್ರೀ ರಾಮ ಕಾಂಪ್ಲೆಕ್ಸ್, ಸಂತೆಕಟ್ಟೆ, ಬೆಳ್ತಂಗಡಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ: 8861112182 ಈ ನಂಬರ್ ಅನ್ನು ಸಂಪರ್ಕಿಸಬಹುದು.