ಶಿಶಿಲ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಶಿಶಿಲದ ಒಕ್ಕಲಿಗರ ಗ್ರಾಮ ಸಮಿತಿ, ಯುವ ಸಮಿತಿ ಮಹಿಳಾ ಸಮಿತಿಯಿಂದ ಮೇ. 12ರಂದು ವಿಶೇಷ ಪ್ರಾರ್ಥನೆ, ಸನ್ನಿಧಿಯಲ್ಲಿ ದೇವರಿಗೆ ಸರ್ವ ಸೇವೆ ಸಲ್ಲಿಸಿದರು.
ಭಾರತ ದೇಶದ ವೀರ ಯೊಧರಿಗೆ ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ ಮತ್ತು ಅಪರೇಷನ್ ಸಿಂಧೂರ ಕಾರ್ಯಚರಣೆ ಯಶಸ್ವಿಯಾಗಲೆಂದು ಭಗವಂತನ ಅನುಗ್ರಹಕ್ಕಾಗಿ ಒಕ್ಕಲಿಗ ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಶ್ರೀ ಶಿಶಿಲೇಶ್ವರ ದೇವಸ್ಥಾನದ ನಿಕಟ ಪೂರ್ವ ಅಧ್ಯಕ್ಷ ಶ್ರೀನಿವಾಸ ಮೂಡೆತ್ತಾಯ, ಅರ್ಚಕ ರಾಮ ಕಾರಂತ, ಒಕ್ಕಲಿಗ ಗ್ರಾಮ ಸಮಿತಿ ಅಧಕ್ಷ ಕುಶಾಲಪ್ಪ ಗೌಡ ಜಿ. ಬದ್ರಿಜಾಲು, ಉಪಾಧ್ಯಕ್ಷ ಕೊರಗಪ್ಪ ಗೌಡ, ಶಿಶಿಲ ಗ್ರಾಮ ಗೌಡರಾದ ರಮೇಶ್ ಗೌಡ, ಸಮಿತಿ ಕಾರ್ಯದರ್ಶಿ ಭುವನ್ ಕುಮಾರ್ ಶಿಶಿಲ, ರಾಕೇಶ್ ಗೌಡ ಪಡ್ಪು, ಉಮಾವತಿ ಗಣೇಶ್ ಗೌಡ ಓಟ್ಲ, ಕೋಮಲಾಕ್ಷಿ ಹಾಗೂ ಬೈಲುವಾರು ಸಮಿತಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.