ಬೆಳಾಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಉಜಿರೆ ವಲಯದ, ಮಾಯಾ ಕಾರ್ಯಕ್ಷೇತ್ರದಲ್ಲಿ ಚಿಗುರು ಸಂಘದ ಪರಾರಿ ವಸಂತಿ ಇವರಿಗೆ ಅಪಘಾತವಾಗಿ ಸರ್ಜರಿ ಆಗಿರುವುದರಿಂದ, ಸಮುದಾಯ ಅಭಿವೃದ್ಧಿ ವಿಭಾಗದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚೇರ್ ನ್ನು ನೀಡಲಾಯಿತು. ಮಾಯಾ ಒಕ್ಕೂಟದ ಅಧ್ಯಕ್ಷ ಗಂಗಾಧರ್ ಸಾಲ್ಯಾನ್, ವಲಯ ಮೇಲ್ವಿಚಾರಕಿ ಪೂರ್ಣಿಮಾ, ಮಾಜಿ ಉಪಾಧ್ಯಕ್ಷ ದೇಜಪ್ಪ ಗೌಡ, ಪದಾಧಿಕಾರಿ ರಾಮಚಂದ್ರ, ಸೇವಾ ಪ್ರತಿನಿಧಿ ಪ್ರಭಾ ಮನೆಯವರು ಉಪಸ್ಥಿತರಿದ್ದರು.