ಅಳದಂಗಡಿ: ಸರ್ಕಾರಿ ಪ್ರೌಢ ಶಾಲೆ ಕೆದ್ದುವಿನಲ್ಲಿ 2007ರ ಎಸ್. ಎಸ್. ಎಲ್. ಸಿ ಎ ಬ್ಯಾಚ್ ನ ವಿದ್ಯಾರ್ಥಿಗಳಿಂದ ಸ್ನೇಹ ಸಂಭ್ರಮ ಕಾರ್ಯಕ್ರಮವು ಮೇ. 4ರಂದು
ಶಾಲಾ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ, ನಿವೃತ್ತ ಶಿಕ್ಷಕರಾದ ಯಶೋಧರ ಸುವರ್ಣ, ಮಾರ್ಗರಿಟಾ ಪಿಂಟೋ, 2007ರ ಬ್ಯಾಚ್ ವಿಧ್ಯಾರ್ಥಿಗಳ ಪರವಾಗಿ ಪ್ರಮೀಳಾ ಹಾಗೂ ಅವಿನಾಶ್ ಕುಲಾಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪರವಾಗಿ ವಾಸು ಬಳಂಜ, ಸುಷ್ಮಾ, ಪೂರ್ಣೇಶ್ ಕಾಪಿನಡ್ಕ, ವಾಯ್ಲೆಟ್ ಮೋನಿಸ್, ಮನೋಹರ್ ಪ್ರಸಾದ್, ಸಂದೀಪ್ ಎಸ್. ನೀರಲ್ಕೆ ಅರ್ವ ಅಭಿಪ್ರಾಯ ಹಾಗೂ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಮಾರ್ಗರಿಟಾ ಪಿಂಟೋ, ಶಾಂತಿ-ಯಶೋಧರ ಸುವರ್ಣ ರವರು ಸ್ಪೂರ್ತಿಯುತ ಮಾತುಗಳನ್ನಾಡಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಶಾಲಾ ಅಭಿವೃದ್ಧಿ ಚಟುವಟಿಕೆಗಳಿಗೆ ಕೈಜೋಡಿಸುವ ಕುರಿತು ಚರ್ಚೆ ನಡೆಸಲಾಯಿತು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸಂದೀಪ್ ಎಸ್. ನೀರಲ್ಕೆ ಧನ್ಯವಾದ ಸಲ್ಲಿಸಿದರು.