ಕುವೆಟ್ಟು: ಗ್ರಾಮ ಪಂಚಾಯತ್ ಹಾಗೂ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಕುವೆಟ್ಟು ಇಲ್ಲಿ ಮಕ್ಕಳ ಬೇಸಿಗೆ ಶಿಬಿರವು ಮೇ. 5ರಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ನೆರವೇರಿಸಿ, ಶಿಬಿರಕ್ಕೆ ಶುಭ ಹಾರೈಸಿದರು.
ಶಿಬಿರದ ಪ್ರಥಮ ದಿನ ಸಂಪನ್ಮೂಲ ವ್ಯಕ್ತಿಯಾಗಿ ಆಶಾಕಾರ್ಯಕರ್ತೆ ಜಲಜಾಕ್ಷಿ ಮಕ್ಕಳ ವ್ಯಕ್ತಿತ್ವ ವಿಕಸನ ಹಾಗೂ ವಿವಿಧ ಚಟುವಟಿಕೆ ನಡೆಸಿಕೊಟ್ಟರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ, ಕಾರ್ಯದರ್ಶಿ ಸೇವಂತಿ, ಪಂಚಾಯತ್ ಸದಸ್ಯ ಮಂಜುನಾಥ್ ನಾಯಕ್, ವೇದಾವತಿ ಹಾಗೂ ಸಲಹಾ ಸಮಿತಿಯ ಸದಸ್ಯರು, ವಿ. ಆರ್. ಡಬ್ಲ್ಯೂ, ಸುಲೋಚನಾ ವಿ. ಸಂಜೀವಿನಿ ಗುಂಪಿನ ಸದಸ್ಯರು ಪಂ. ಸಿಬ್ಬಂದಿಗಳು ಅರಿವು ಕೇಂದ್ರದ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪಂಚಾಯತ್ ಸಿಬ್ಬಂದಿ ಆನಂದ ಕೋಟ್ಯಾನ್ ನೆರವೇರಿಸಿದರು. ಹಾಜರಾದ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಪಂಚಾಯತ್ ನಿಂದ ಮಾಡಲಾಯಿತು. ಕೊನೆಗೆ ಗ್ರಂಥಾಲಯ ಮೇಲ್ವಿಚಾರಕಿ ವಸಂತಿ ಧನ್ಯವಾದ ಸಲ್ಲಿಸಿದರು.