ಮಡಂತ್ಯಾರು: ಕೆನರಾ ಕಾಲೇಜು ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಮೂಲ್ಕಿ ದಯಾನಂದ್ ಕಾಮತ್ ಮೆಮೋರಿಯಲ್ ಟ್ರೋಫಿಗಾಗಿ ನಡೆದ ಮಂಗಳೂರು ವಿ. ವಿ. (ಮಂಗಳೂರು ವಲಯ) ಅಂತರ್ ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾಕೂಟದಲ್ಲಿ ಸೇಕ್ರೆಡ್ ಹಾರ್ಟ್ ಕಾಲೇಜು ತಂಡವು ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವುದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ.
ಎಸ್. ಡಿ. ಎಂ. ಸಿ. ಬಿ. ಎಂ. ವಿರುದ್ಧವಾಗಿ ನಡೆದ ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಎಸ್. ಡಿ. ಎಂ. ತಂಡವು 78 ರನ್ನು ಗಳಿಗೆ ಆಲ್ ಔಟ್ ಆಯಿತು. ಸೇಕ್ರೆಡ್ ಹಾರ್ಟಿನ ಶಿವಾoಶು 3 ವಿಕೆಟ್ ಪಡೆದರೆ ಸ್ವಸ್ತಿಕ್, ನಯನ್, ವಿಕಾಸ್ ಮತ್ತು ತುಷಾರ್ ತಲಾ ಒಂದು ವಿಕೆಟ್ ಪಡೆದರು.
79 ರನ್ನು ಗಳ ಗುರಿಪಡೆದ ಸೇಕ್ರೆಡ್ ಹಾರ್ಟ್ ತಂಡವು 10.1 ಓವರುಗಳಲ್ಲಿ 5 ವಿಕೆಟಿಗೆ ಗುರಿಮುಟ್ಟಿತು. ತಂಡದ ಪರವಾಗಿ ನಯನ್ 39 (29) ಹಾಗೂ ನೂತನ್ 28 (18) ರನ್ನು ಗಳಿಸಿದರು.
ಸರಣಿಯುದ್ಧಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೇಕ್ರೆಡ್ ಹಾರ್ಟ್ ನ ನಯನ್ ಸರಣಿಯ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಫೈನಲ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಲಳಿಸಿದ ಎಸ್. ಡಿ. ಎಂ. ನ ರೆಹನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರೆ. ಫೈನಲ್ ನಲ್ಲಿ 3 ವಿಕೆಟ್ ಕಿತ್ತ ಸೇಕ್ರೆಡ್ ಹಾರ್ಟ್ ಕಾಲೇಜಿನ ಶಿವಾಂಶು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.