
ಕಣಿಯೂರು: ಮಾದ ಸಪಲ್ಯ ಕಣಿಯೂರು ಇವರ ಮನೆಗೆ
ಎ.30ರಂದು ಸಂಜೆ ಗಾಳಿ ಮಳೆಗೆ ಮೇಲ್ಚಾವಣಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ ನೀಡಿ ವೈಯಕ್ತಿಕ ಧನ ಸಹಾಯ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದರು.ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ್ ಉಪಸ್ಥಿತರಿದ್ದರು.