
ಶಿಶಿಲ: ಗ್ರಾಮದ ವೈಕುಂಠ ಪುರ ಬಳಿ ಇರುವ ಶ್ರೀ ದುರ್ಗಾ ಪರಮೇಶ್ವರಿ ಯುವಕ ಮಂಡಲದ ಹತ್ತಿರ ರಂಗಮಂಟಪ ನಿರ್ಮಿಸಲು ಬೆಸ್ಟ್ ಫೌಂಡೇಶನ್ ಅಧ್ಯಕ್ಷ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ವಿಧಾನ ಪರಿಷತ್ ಸದಸ್ಯ ಬಿ. ಕೆ. ಹರಿಪ್ರಸಾದ್ ರವರ ಬಳಿ ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದು ಯುವಕ ಮಂಡಲದ ಸದಸ್ಯರಿಗೆ, ಪಕ್ಕದಲ್ಲೇ ಇರುವ ಚಾಮುಂಡೇಶ್ವರಿ ದೇವಸ್ಥಾನದ ಹಾಗೂ ಇನ್ನಿತರ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಅನುಕೂಲವಾಗುವುದು.
ಇತ್ತೀಚೆಗೆ ನಡೆದ ಬೆಳ್ಳಿ ಹಬ್ಬದ ಸಂಧರ್ಭದಲ್ಲಿ ರಂಗಮಂಟಪದ ವ್ಯವಸ್ಥೆ ಮಾಡಿಸಿಕೊಡುವುದಾಗಿ ರಕ್ಷಿತ್ ಶಿವರಾಂರವರು ಯುವಕ ಮಂಡಲದ ಸದಸ್ಯರಿಗೆ ಭರವಸೆ ನೀಡಿದ್ದರು. ಅದನ್ನು ನೆರವೇರಿಸಿದ್ದಾರೆ ಎಂದು ಯುವಕ ಮಂಡಲದ ಸ್ಥಾಪಕ, ಅಧ್ಯಕ್ಷ ರಾಮಚಂದ್ರ ಮಲೆಕುಡಿಯ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.