
ವೇಣೂರು: ಯುವಕ ಮಂಡಲ ಮೂಡುಕೋಡಿ ಇದರ ಆಶ್ರಯದಲ್ಲಿ ತುಳು ನಾಡ ಶೈಲಿಯ ಕೊತ್ತಲಿಗೆ, ಟ್ರೋಫಿ ಕ್ರಿಕೆಟ್ ಪಂದ್ಯಾಟ ಹಾಗೂ ಮುಕ್ತ ಹಗ್ಗ ಜಗ್ಗಾಟ ಉಮಾಮಹೇಶ್ವರ ದೇವಾಸ್ಥಾನದ ಬಳಿ ಎ. 26ರಂದು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ವಕೀಲ ನಾಗೇಶ್ ಶೆಟ್ಟಿ ಮಾತನಾಡಿ ತುಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು ಎಂದರು.
ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದ ಮೂಡುಕೋಡಿಯ ಕಂಬಳದ ಕೋಣಗಳ ಮಾಲೀಕರು, ಪುರೋಹಿತರು ಗಣೇಶ್ ನಾರಾಯಣ್ ಪಂಡಿತ್ ಮಾತನಾಡಿ ನಮ್ಮ ತುಳುನಾಡ ಕ್ರೀಡೆ ಮರುಕಳಿಸುತ್ತ ಇರೋದು ನಮ್ಮ ಮೂಡುಕೋಡಿಯ ಹೆಮ್ಮೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಲೋಕಯ್ಯ ಪೂಜಾರಿ, ಉದ್ಯಮಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮುಸ್ತಾಫ್, ಸಮಾಜ ಸೇವಕರಾದ ಮಾರ್ಕ್ ಪಿರೇರಾ, ಕರಿಮಣೇಲು ಸಂಕೇತ್, ಶಾಂತಿ ಮಾಂಟ್ರಡಿ, ಸ್ಥಳಿಯರಾದ ಶ್ರೀಧರ ಆಚಾರ್ಯ, ಡಾಕಯ್ಯ ಆಚಾರ್ಯ, ಕಾಂಗ್ರೆಸ್ ಮೂಡುಕೋಡಿ ಗ್ರಾಮ ಸಮಿತಿಯ ಅಧ್ಯಕ್ಷ ಸುದರ್ಶನ ಕೋಟ್ಯನ್ ಉಪಸ್ಥಿತರಿದ್ದರು. ಪಂದ್ಯಾಟದ ಕಲ್ಪನೆ ಹಾಗೂ ಸಂಪೂರ್ಣ ಉಸ್ತುವಾರಿ ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ.ಪಾಯಸ್ ಅವರದ್ದು ಆಗಿದ್ದು, ಸುರಿಯುವ ಮಳೆಯಲ್ಲು ಮೂಡುಕೋಡಿ ಯುವಕರ ಶ್ರಮದಿಂದ ಕೊತ್ತಲಿಗೆ ಕ್ರಿಕೆಟ್ ಪಂದ್ಯಾಟ ನಡೆಯಿತು. ಉಪನ್ಯಾಸಕ ಚಂದ್ರಪ್ಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.