ಗೇರುಕಟ್ಟೆ: ಶ್ರೀ ಚಾಮುಂಡೇಶ್ವರಿ ಮಕ್ಕಳ ಕುಣಿತ ಭಜನಾ ಮಂಡಳಿ ಪಿಲಿಗೂಡು ಹಾಗೂ ಚಾಮುಂಡೇಶ್ವರಿ ಮಿತ್ರ ಮಂಡಳಿ ಮತ್ತು ನಾಗೇಶ್ ಬಿ. ನೆರಿಯಾ ಇವರ ಸಾರ್ಥ್ಯದಲ್ಲಿ ನಡೆದಂತಹ ಭಜನಾ ಕಮ್ಮಟೋತ್ಸವದಲ್ಲಿ 2024ನೇ ಸಾಲಿನ ಭಜನಾ ಕಾರ್ಯಕ್ರಮದಲ್ಲಿ ಪ್ರಪ್ರಥಮ ಬಾರಿಗೆ ಪ್ರತಿಭಾನ್ವಿತ 63 ಮಕ್ಕಳನ್ನು ಗೌರವಿಸಿದ್ದು, ಈ ಭಾರಿ ಭಜನೆಯಿಂದ ಅದೆಷ್ಟೋ ಮಕ್ಕಳು ಬದಲಾವಣೆಯಾಗಿದ್ದಾರೆಂದರೆ 10 ಪಟ್ಟು ಹೆಚ್ಚು ಮಕ್ಕಳು ಪ್ರತಿಭಾನ್ವಿತರು ವೇದಿಕೆ ಹತ್ತಿದ್ದಾರೆ.
650ಕ್ಕೂ ಮಿಕ್ಕಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ದೊರೆತಿದ್ದು ಇದು ನಮ್ಮ ಭಜನೆಯಿಂದ ಆದ ಬದಲಾವಣೆ ಅನ್ನಬಹುದು. ಮುಂದಕ್ಕೆ ಬೇರೆ ರೀತಿಯಾದಂತಹ ಭಜನಾ ಕಾರ್ಯಕ್ರಮದಲ್ಲಿ ಮಕ್ಕಳನ್ನು ಗೌರವಿಸುವ ಹಾಗೂ ಪೋಷಕರನ್ನು ಗೌರವಿಸುವಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು ಹಾಗೂ 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಮಕ್ಕಳಿಗೆ ವಿಶೇಷ ರೀತಿಯ ಗೌರವಾರ್ಪಣೆನೆಯು ನಡೆಯಲಿರುವುದು.
ಬೆಳ್ತಂಗಡಿ ತಾಲೂಕಿನ ಕುಣಿತ ಭಜನಾ ತರಬೇತುದಾರ ತಂಡದ ಸಂಯುಕ್ತಾಕ್ಷರದಲ್ಲಿ ಭಜನಾ ಮಂಡಳಿಗಳ ಒಗ್ಗೂಡುವಿಕೆಯಲ್ಲಿ ಇಂತಹ ಕಾರ್ಯಕ್ರಮಗಳು ಮಾಡುತ್ತಿದ್ದು, ಮುಂದಕ್ಕೆ ಧಾರ್ಮಿಕತೆ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ವೇದಿಕೆಗಳನ್ನು ನಿರ್ಮಿಸಲು ಹೆಜ್ಜೆ ಇಡಲಿದೆ. ಕಾರ್ಯಕ್ರಮದಲ್ಲಿ ಊರಿನ ವೈದ್ಯರಾಗಿರುವಂತಹ ವೆಂಕಟರಮಣ ಭಟ್ ದಂಪತಿಗಳ ವೈದ್ಯಕೀಯ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಹಾಗೂ ಹಿರಿಯ ದಂಪತಿಗಳಾದ ಅಣ್ಣುಗೌಡ, ಅಪ್ಪಿ ಹಲಕ್ಕಿ ಕಣಿಯೂರು ಮತ್ತು ಭಜನಾ ಗುರುಗಳಾದ ನಾಗೇಶ್ ಬಿ, ನೆರಿಯ, ಸಂದೇಶ್ ಮದ್ದಡ್ಕ ಇವರನ್ನು ಗೌರವಿಸಿ ಹಾಗೂ ಭಜನಾ ತಂಡಕ್ಕೆ ಸದಾ ಪ್ರೋತ್ಸಾಹ ನೀಡುವ ಚಿರಂಜೀವಿ ಶೆಟ್ಟಿ ನಾಳ ಮತ್ತು ತಿಮ್ಮಪ್ಪ ಪೂಜಾರಿ ಹಾಗೂ ಚಾಮುಂಡೇಶ್ವರಿ ಮಿತ್ರ ಮಂಡಳಿಯ ಅಧ್ಯಕ್ಷ, ಭಜನ ಮಂಡಳಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ಗಾನ ಸುರಭಿ ತಂಡದ ಭಕ್ತಿಯ ಜೇಂಕಾರಕ್ಕೆ ಭಾಗವಹಿಸಿದಂತಹ ಭಜನಾ ಮಕ್ಕಳು ಭಕ್ತಿಯ ಹೆಜ್ಜೆಯನ್ನು ಹಾಕಿದರು. ಈ ಕಾರ್ಯಕ್ರಮಕ್ಕೆ ಕಿರಣ್ ಡಿ ಪುಷ್ಪಗಿರಿ, ಸುದರ್ಶನ್ ಹೆಗ್ಗಡೆ ಹೆಚ್.ಎಲ್., ಸುರೇಶ್, ಭಾಸ್ಕರಗೌಡ, ಸೀತಾರಾಮ ಆಳ್ವ, ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ್ ಹಾಗೂ ಅನೇಕ ಗಣ್ಯತಿ ಗಣ್ಯರು ಭಾಗವಹಿಸಿ ಶುಭ ಹಾರೈಸಿದರು. ರಾಮ್ ಕುಮಾರ್ ಮಾರ್ನಾಡು ನಿರೂಪಿಸಿದರು.