ಚಾರ್ಮಾಡಿ: ಗ್ರಾಮದ ಪರ್ಲಾಣಿ ನದಿ ಸೇತುವೆ ಪಕ್ಕದಲ್ಲಿ 2019ರ ಭೀಕರ ಪ್ರವಾಹದಲ್ಲಿ ಸಂಪೂರ್ಣ ಕೊಚ್ಚಿ ಹೋಗಿದ್ದ ಕೃಷ್ಣಪ್ಪ ಗೌಡರವರ ಮನೆ ನಂತರದಲ್ಲಿ ಸಾಲ ಮಾಡಿ ಹೊಸ ಮನೆ ಮಾಡಿಕೊಂಡು ಕುಟುಂಬ ವಾಸವಿದ್ದರು. ಏ. 26ರಂದು ಕೃಷ್ಣಪ್ಪ ಗೌಡರವರ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದೆ. ವಿದ್ಯುತ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳು ಹಾನಿಯಾಗಿದೆ.
ಕೃಷ್ಣಪ್ಪ ಗೌಡ ಮತ್ತು ಇತರ ಸದಸ್ಯರು ಕಾರ್ಯಕ್ರಮಕ್ಕೆ ಹೊರಗಡೆ ಹೋಗಿದ್ದು, ಘಟನೆ ಸಂಧರ್ಭ ಮನೆಯಲ್ಲಿ ಕೃಷ್ಣಪ್ಪ ಗೌಡರ ಅಜ್ಜಿ ಮತ್ತು ಮಗಳು ಇದ್ದರು. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.