ದ. ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಪ್ರಭಾಕರ್ ಹೆಚ್. ಆರಂಬೋಡಿ ಆಯ್ಕೆ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯುಎಲ್) ಆಡಳಿತ ಮಂಡಳಿಗೆ ಏ.26ರಂದು ಚುನಾವಣೆ ನಡೆಯಿತು. ಒಟ್ಟು. 16 ನಿರ್ದೇಶಕ ಸ್ಥಾನಗಳಿಗೆ 41 ಮಂದಿ ಅಂತಿಮ ಕಣದಲ್ಲಿದ್ದರು.

ಬೆಳ್ತಂಗಡಿ ಸಹಕಾರ ಭಾರತಿ ಅಭ್ಯರ್ಥಿ ಹೆಚ್. ಪ್ರಭಾಕರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪುತ್ತೂರು ವಿಭಾಗ 218 ಮತದಾರಿದ್ದು ಕೆ.ಚಂದ್ರಶೇಖರ ರಾವ್, ಜಗನ್ನಾಥ ಶೆಟ್ಟಿ, ಎಸ್. ಬಿ.ಜಯರಾಮ ರೈ, ಹೆಚ್.ಪ್ರಭಾಕರ, ಭರತ್ ಎನ್. ಪಿ., ರಮೇಶ್ ಪೂಜಾರಿ, ರಾಮಕೃಷ್ಣ ಡಿ. ಸ್ಪರ್ಧಿಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನಿಂದ ಆರಂಬೋಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಹೆಚ್. ಪ್ರಭಾಕರ್ ಹಾಗೂ ಗೂಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಮಧ್ಯೆ ಹಣಾಹಣಿ ನಡೆಯಿತು.

LEAVE A REPLY

Please enter your comment!
Please enter your name here