ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳ ಜೆಇಇ ಮೈನ್-2 ಫಲಿತಾಂಶ: ರಾಷ್ಟ್ರಮಟ್ಟದ ರ‍್ಯಾಂಕ್‌ಗಳ ಸಾಧನೆ

0

ಬೆಳ್ತಂಗಡಿ: ಎನ್‌ಟಿಎ ನಡೆಸುವ ರಾಷ್ಟ್ರಮಟ್ಟದ ಇಂಜಿನಿಯರ್ ಪ್ರವೇಶ ಪರೀಕ್ಷೆಯ ಜೆಇಇ ಮೈನ್-೨ ಇದರ ಫಲಿತಾಂಶ ಪ್ರಕಟವಾಗಿದ್ದು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ
ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಭಾರತೀಯ ತಂತ್ರಜ್ಞಾನ ಸಂಸ್ಥೆ ಜೆಇಇ ಅಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಪಡೆಯಲು ನಡೆಸುವ ಈ
ಪರೀಕ್ಷೆಯ ಈ ಬಾರಿಯ ಫಲಿತಾಂಶದಲ್ಲಿ ಸಂಸ್ಥೆಯ ಶಿಶಿರ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ೫೨೮ ನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೆ ಸಂಸ್ಥೆಯ ಶ್ರೇಯಾಂಕ್ ಮನೋಹರ್ ಪೈ ರಾಷ್ಟ್ರಮಟ್ಟದಲ್ಲಿ ೨೮೦೦ ನೇ ರ‍್ಯಾಂಕ್, ಕಾರ್ತಿಕ್ ಎಸ್ ೩೬೨೦ನೇ (eತಿ) ರ‍್ಯಾಂಕ್ ಸ್ಮಿರಾ ತಲ್ವಾರ್ ೪೮೦ ನೇ ರ‍್ಯಾಂಕ್ (ಛಿ), ಶ್ರೇಯಸ್ ಹೆಚ್.ಎಸ್ ೧೬೪೮(ಛಿ)ನೇ ರ‍್ಯಾಂಕ್, ಶೌರ್ಯ ಬಿ ತಲ್ವಾರ್ ೧೯೬೨ನೇ ರ‍್ಯಾಂಕ್(ಛಿ), ಪೂರ್ಣಚಂದ್ರ ೩೦೫೧ನೇ ರ‍್ಯಾಂಕ್(ಛಿ) ಪಡೆಯುದರೊಂದಿಗೆ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ ೯೭ ವಿದ್ಯಾರ್ಥಿಗಳಲ್ಲಿ ಒಟ್ಟು ೪೫ ವಿದ್ಯಾರ್ಥಿಗಳು ಎನ್‌ಟಿಎ ನಡೆಸುವ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೇದಿರುತ್ತಾರೆ. ಅದರಲ್ಲಿ ೩ ವಿದ್ಯಾರ್ಥಿಗಳು ೯೯ ಪರ್ಸೆಂಟೈಲ್‌ಗಿಂತ ಹೆಚ್ಚು, ೫ ವಿದ್ಯಾರ್ಥಿಗಳು ೯೮ ಪರ್ಸೆಂಟೈಲ್‌ಗಿಂತ ಹೆಚ್ಚು ಮತ್ತು ೧೨ ವಿದ್ಯಾರ್ಥಿಗಳು ೯೭ ಪರ್ಸೆಂಟೈಲ್‌ಗಿಂತ ಹೆಚ್ಚು, ೬೩ ವಿದ್ಯಾರ್ಥಿಗಳು ೯೦ ಪರ್ಸೆಂಟೈಲ್‌ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಎಕ್ಸಲೆಂಟ್ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ರಾಷ್ಟ್ರಮಟ್ಟದಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಿದೆ. ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ವಿದ್ಯಾರ್ಥಿಗಳ
ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here