

ಗುರುವಾಯನಕೆರೆ: ಎಕ್ಸೆಲ್ ಸಮೂಹ ಸಂಸ್ಥೆಗಳ ಐದು ವರ್ಷಗಳ ಸಾರ್ಥಕ ವಿದ್ಯಾ ಸೇವೆಯ ಸ್ಮರಣಾರ್ಥ ಪಂಚ ಪರ್ವ ಅಂಗವಾಗಿ ಶ್ರೀ ವಿದ್ಯಾ ಗಣಪತಿ ದೇವರ ವಿಗ್ರಹ ಅನಾವರಣ ಎ.20ರಂದು ಅಪರಾಹ್ನ ಗಂಟೆ 12.30 ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಡಿ ಕೆ ಶಿವಕುಮಾರ್ ( ಉಪ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ), ದಿನೇಶ್ ಗುಂಡೂರಾವ್ ( ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ), ರಕ್ಷಿತ್ ಶಿವರಾಂ (ಅಧ್ಯಕ್ಷರು ಬೆಸ್ಟ್ ಫೌಂಡೇಶನ್), ಸುಮಂತ್ ಕುಮಾರ್ ಜೈನ್ (ಅಧ್ಯಕ್ಷರು ಎಕ್ಸೆಲ್ ಕಾಲೇಜು ಆಡಳಿತ ಮಂಡಳಿ), ಡಾ.ನವೀನ್ ಕುಮಾರ್ ಮರಿಕೆ (ಪ್ರಾಂಶುಪಾಲರು ವಿದ್ಯಾಸಾಗರ ಕ್ಯಾಂಪಸ್), ಡಾ.ಪ್ರಜ್ವಲ್ ಪ್ರಭಾರ (ಪ್ರಾಂಶುಪಾಲರು ಅರಮಲೆಬೆಟ್ಟ ಕ್ಯಾಂಪಸ್) ಇವರು ಉಪಸ್ಥಿತರಿರಲಿದ್ದಾರೆ.