ವೇಣೂರು: ನವೋದಯ ಸ್ವ ಸಹಾಯ ಸಂಘದ ರಜತ ಮಹೋತ್ಸವ: ಸಮವಸ್ತ್ರ ವಿತರಣಾ ಕಾರ್ಯಕ್ರಮ

0

ವೇಣೂರು: ನವೋದಯ ಸ್ವಸಹಾಯ ಸಂಘದ ರಜತ ಮಹೋತ್ಸವದ ಅಂಗವಾಗಿ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ನ ಅಧ್ಯಕ್ಷ ಡಾ. ಎಮ್. ಎನ್. ರಾಜೇಂದ್ರ ಕುಮಾರ್ ರವರು ನೀಡಿದ ಸಮವಸ್ತ್ರವನ್ನು ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ವೇಣೂರು ಶಾಖೆಯಲ್ಲಿರುವ ಮಹಿಳಾ ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ಲಯನ್ಸ್ ಕ್ಲಬ್ ನ ಮಹಾಸೇನ ಇಂದ್ರ ವೇದಿಕೆಯಲ್ಲಿ ನಡೆಸಲಾಯಿತು.

ನವೋದಯ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಶಾಖೆಯ ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್., ತಾಲೂಕು ಮೇಲ್ವಿಚಾರಕ ಸ್ಟ್ಯಾನ್ಲಿ ಪಿಂಟೋ, ವೇಣೂರು ವಲಯದ ಪ್ರೇರಕಿ ಆಶಾಲತಾ, ಯಶೋಧರ ಬಂಗೇರ, ನವೋದಯ ಬ್ಯಾಂಕ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here