ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಹಂಚಿಕೆ

0

ಬೆಳ್ತಂಗಡಿ: ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಹಾಗೂ ವಾಣಿ ವಿದ್ಯಾಸಂಸ್ಥೆಗಳ ನೂತನ ಕಟ್ಟಡ ಹಾಗೂ ಸಭಾಭವನದ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರದ ಬಿಡುಗಡೆಯು ಬಾರ್ಯ ಪುತ್ತಿಲ ಪಿಲಿಗೂಡು ಸಮಿತಿಯ ಶಿವಪ್ರಸಾದ್ ಗೌಡ ಕರ್ಪಾಡಿ ಅವರ ಮನೆಯಲ್ಲಿ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ತಾಲೂಕು ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪಗೌಡ ಸವಣಾಲು ಹಾಗೂ ತಾಲೂಕಿನ ಯುವವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ ಹಾಗೂ ಬೆಳ್ತಂಗಡಿ ತಾಲೂಕು ಸಮಿತಿಯ ನಿರ್ದೇಶಕ ಪ್ರಸನ್ನ ಗೌಡ ಬೋಳ್ತಡ್ಕ ಮತ್ತು ವಾಣಿ ಬ್ಯಾಂಕಿನ ನಿರ್ದೇಶಕ ಸುನೀಲ್ ಅಣವು ಹಾಗೂ ಪುರಂದರ ಗೌಡ ಹಾಗೂ ತಾಲೂಕು ಸಮಿತಿಯ ಅಧ್ಯಕ್ಷ ಮೋನಪ್ಪ ಗೌಡ ಮನಿಲ ಮತ್ತು ಪಿಲಿಗೂಡು ಸಮಿತಿಯ ಧರ್ಣಪ್ಪ ಹಾಗೂ ಜಿಲ್ಲಾ ಸಮಿತಿಯ ಸಂಚಾಲಕಿ ಭವಾನಿ ಅಜಿರ ಮತ್ತು ಗ್ರಾಮ ಸಮಿತಿಯ ಸಂಚಾಲಕ ಕಮಲಾಕ್ಷ ಗೌಡ ಮತ್ತು ಶಿವಪ್ರಸಾದ್ ಗೌಡ ಉಪಸ್ಥಿತಿಯಲ್ಲಿದ್ದು ಹಾಗೂ ಊರ ಗೌಡರ ಸಮಾಕ್ಷಮದಲ್ಲಿ ಈ ಕಾರ್ಯಕ್ರಮದ ಆಮಂತ್ರಣ ಪತ್ರದ ಬಿಡುಗಡೆಯನ್ನು ಮಾಡಲಾಯಿತು.

ಹಾಗೂ ಈ ಕಾರ್ಯಕ್ರಮದಲ್ಲಿ ಬಾರ್ಯಪುತ್ತಿಲ ಪಿಲಿಗೂಡು ಸಮಿತಿಯಿಂದ 65000 ದೇಣಿಗೆಯನ್ನು ಕಟ್ಟಡಕ್ಕೆ ಸಹಾಯಧನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮತ್ತೊಂದು ವಿಶೇಷತೆ ಅಂದರೆ ಆರ್ಥಿಕವಾಗಿ ಹಿಂದುಳಿದ ಸ್ವಜಾತಿ ಭಾಂದವರಿಗೆ 10000/- ಚೆಕ್ ಮೂಲಕ ದೇಣಿಗೆಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಗ್ರಾಮ ಸಮಿತಿಯ ಕಾರ್ಯದರ್ಶಿಯ ಲೋಕೇಶ್ ಗೌಡ ಕುರುಡಂಗೆ ಅವರು ನಿರೂಪಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ವಂದನಾರ್ಪಣೆಯನ್ನು ಕಮಲಾಕ್ಷಗೌಡ ಕರ್ಪಾಡಿ ಅವರು ನೇರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಜಾತಿ ಭಾಂಧವರಲ್ಲದೆ ಇತರ ಸಮುದಾಯದವರು ಕೂಡ ಭಾಗವಹಿಸಿ 300ಕ್ಕಿಂತ ಅಧಿಕ ಜನರ ಪಾಲ್ಗೊಂಡಿದ್ದರು. ಪಾಲ್ಗೊಂಡ ಎಲ್ಲಾ ಭಾಂಧವರಿಗೆ ಊಟ ಉಪಚಾರವನ್ನು ಪ್ರಸನ್ನ ಗೌಡ ಬೋಳ್ತಡ್ಕ ಅವರು ಕೊಟ್ಟು ಸಹಕರಿಸಿದರು.

LEAVE A REPLY

Please enter your comment!
Please enter your name here