ಎ. 20-23: ಶ್ರೀ ರಾಘವೇಂದ್ರ ಸ್ವಾಮಿಗಳ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬೆಳ್ತಂಗಡಿ: ಎ.10ರಂದು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಏ. 20ರಿಂದ 23ರವರೆಗೆ ನಡೆಯುವ ಮೂರನೇ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ರಾಘವೇಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು.

2000 ಇಸವಿಯಿಂದ ಪ್ರಾರಂಭವಾದ ಬೆಳ್ತಂಗಡಿಯ ರಾಘವೇಂದ್ರ ಮಠದ ಬೆಳವಣಿಗೆಯನ್ನು ಸವಿಸ್ತಾರವಾಗಿ ಪ್ರಸ್ತಾವಿಸಿದ ಎಸ್. ಡಿ. ಎಮ್ ಕಾಲೇಜಿನ ಮಾಜಿ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ ಅವರು ಸವಿಸ್ತಾರವಾಗಿ ತಿಳಿಸಿದರು.

ಬ್ರಹ್ಮ ಕಲಶೋತ್ಸವದ ಕಾರ್ಯದಲ್ಲಿ ಭಾಗವಹಿಸುವ ನಾವೆಲ್ಲ ಪುಣ್ಯವಂತರು, ಭಕ್ತಾದಿಗಳು ತನುಮನ ಧನದಿಂದ ಸಹಕರಿಸಬೇಕಾಗಿ ಬ್ರಹ್ಮಕಲಶೋತ್ಸವದ ಅಧ್ಯಕ್ಷ ರಕ್ಷಿತ್ ಶಿವರಾಂರವರು ತಿಳಿಸಿದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು, ಸದ್ಗುರು ಮಹಾಮಂಡಲೇಶ್ವರ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸುಬ್ರಹ್ಮಣ್ಯ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಖ್ಯಾತ ಚಲನಚಿತ್ರ ನಟ ವಿಜಯ ರಾಘವೇಂದ್ರ ಹಾಗೂ ಇತರ ಗಣ್ಯರು4 ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಅಧ್ಯಕ್ಷತೆ ವಹಿಸಿದ್ದ ಪೀತಾಂಬರ ಹೆರಾಜೆ ತಿಳಿಸಿದರು.

ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವದ ಕಾರ್ಯದರ್ಶಿ ಕುಶಾಲಪ್ಪ ಗೌಡ, ಪ್ರೊ. ಎ. ಕೃಷ್ಣಪ್ಪ ಪೂಜಾರಿ, ಎಸ್. ಕೆ. ಆರ್. ಡಿ. ಪಿ. ಯೋಜನಾಧಿಕಾರಿ ಸುರೇಂದ್ರ, ವಿಠಲ ಶೆಟ್ಟಿ, ಮುಖ್ಯ ಅರ್ಚಕ ಶ್ರೀ ರಾಘವೇಂದ್ರ ಬಾಂಗಿನಾಯ, ಮಹಾಬಲ ಶೆಟ್ಟಿ, ಸಂತೋಷ್ ಕುಮಾರ್ ಲಾಯಲ, ಪ್ರವೀಣ್ ಹಳ್ಳಿಮನೆ, ಸೋಮೇಗೌಡ, ಸುಶೀಲ ಹೆಗ್ಡೆ, ಉಮೇಶ್ ಬಂಗೇರ, ಜಯರಾಮ ಬಂಗೇರ, ಶ್ರವಣ್ ರಾಜ್, ನಿತ್ಯಾನಂದ ನಾವರ, ರವೀಂದ್ರ ಅಮೀನ್ ಹಾಗೂ ಇತರ ಗಣ್ಯರು ಹಾಜರಿದ್ದರು. ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ಸ್ವಾಗತಿಸಿದರು. ಜಯಾನಂದ ಲಾಯಿಲ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here