

ಬೆಳ್ತಂಗಡಿ: ವಿಧಾನ ಸಭಾ ಕ್ಷೇತ್ರ ವಾಪ್ತಿಯ ಗುರುವಾಯನಕೆರೆ ಶಕ್ತಿ ನಗರ ಮೈದಾನದಲ್ಲಿ ಏ. 20ರಂದು ನಡೆಯುವ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಉಪಸ್ಥಿಯಲ್ಲಿ ಸರಕಾರದ ನಡೆ ಕಾರ್ಯಕರ್ತರ ಕಡೆ ಸಮಾವೇಶದ ಪೂರ್ವಬಾವಿ ಸಭೆಯು ಕಣಿಯೂರು ಗ್ರಾಮ ಶೇಖರ್ ಶೆಟ್ಟಿ ಮನೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದರು. ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷರುಗಳು, ಬೂತ್ ಸಮಿತಿಯ ಅಧ್ಯಕ್ಷರುಗಳು, ಕಾಂಗ್ರೆಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.