ಓ ಚಿನ್ನಾ…. ಯಾಕೆ ಹೀಗಿದೆ?!

0

ಅಕ್ಷಯ ತೃತೀಯಕ್ಕೆ ಚಿನ್ನ ಖರೀರಿ ಮಾಡುವವರಿಗೆ ಚಿನ್ನದ ದರ ಶಾಕ್ ನೀಡಿದೆ.

ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ತೀವ್ರಗೊಂಡ ಕಾರಣ ಚಿನ್ನ ಪ್ರಿಯರ ಹೃದಯ ಬಡಿತವೂ ಹೆಚ್ಚಾಘಲಾರಂಭಿಸಿದೆ. ಚಿನ್ನದ ಬೆಲೆ ಗಗನಕ್ಕೆ ಜಿಗಿಯಲಾರಂಭಿಸಿದ್ದು, ಇಂದಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹9,567 / ಗ್ರಾಂ, 22 ಕ್ಯಾರೆಟ್ ಚಿನ್ನದ ಬೆಲೆ ₹8,770 / ಗ್ರಾಂ ಮತ್ತು ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆ ₹7,176 / ಗ್ರಾಂ ಆಗಿದೆ.

ಮಾರ್ಚ್ 1 ರಂದು 7,940 ರೂ ನಷ್ಟಿದ್ದ ಚಿನ್ನದ ಬೆಲೆ, ಏಪ್ರಿಲ್ 1 ಕ್ಕೆ 8,510ರೂ. ಗೆ ಏರಿಕೆ ಆಗಿತ್ತು. ಟ್ರಂಪ್ ಪ್ರತಿಸುಂಕ ಜಾರಿಮಾಡುವ ಘೋಷಣೆ ಮಾಡಿದ ಬಳಿಕ ಏ.4ರಿಂದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಲ್ಲೋಲಕಲ್ಲೋಲ ಆಗಿದೆ. 4 ದಿನ ಕಡಿಮೆಯಾದ ಬೆಲೆ, ಕಳೆದ 3 ದಿನದಿಂದ ಏರಿಕೆ ಆರಂಭವಾಗಿದೆ. ಇಂದು ಭಾರೀ ಹೆಚ್ಚಳ ಕಂಡಿದ್ದು 22 ಕ್ಯಾರೆಟ್‌ನ ಗ್ರಾಂ ಬೆಲೆ ₹8,770 ಸಾವಿರಕ್ಕೆ ಏರಿಕೆ ಆಗಿದೆ. ಅಕ್ಷಯ ತೃತೀಯಕ್ಕೆ 9 ಸಾವಿರ ದಾಟಿ ೧೦ ಸಾವಿರವರೆಗೆ ಬಂದರೂ ಅಚ್ಚರಿ ಇಲ್ಲ. ಹೀಗಾಗಿ ಇನ್ನು ಮುಂದೆ ಬಡ ವರ್ಗ ಹಾಗೂ ಮಧ್ಯಮ ವರ್ಗಕ್ಕೆ ಚಿನ್ನ ಖರೀದಿ ಆಕಾಶದ ನಕ್ಷತ್ರ ಆಗುವುದರಲ್ಲಿ ಸಂಶಯವಿಲ್ಲ.

LEAVE A REPLY

Please enter your comment!
Please enter your name here