ಧರ್ಮಸ್ಥಳದಲ್ಲಿ ಎಸ್. ಡಿ. ಎಂ ಶಾಲಾ ಶಿಕ್ಷಕರಿಗಾಗಿ ಎಫ್. ಎಲ್. ಎನ್ ಕಾರ್ಯಾಗಾರ

0

ಧರ್ಮಸ್ಥಳ: ಎಸ್.ಡಿ. ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಏ. 10 ರಂದು ಒಂದು ದಿನದ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಎಫ್. ಎಲ್. ಎನ್ (ಫೌಂಡೇಶನಲ್ ಲಿಟರಸಿ ಅಂಡ್ ನ್ಯೂಮರಸಿ) ಕುರಿತು. ಎಸ್. ಡಿ. ಎಂ ಇ ಸೊಸೈಟಿಯ ಶಿಕ್ಷಣ ಸಂಯೋಜಕ ಎಸ್.ಎನ್ ಕಾಕತ್ಕರ್ ರವರು ದೀಪ ಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಶಿಕ್ಷಣದ ಮಹತ್ವ ಮತ್ತು ಅದರಲ್ಲಿ ಶಿಕ್ಷಕರ ಪಾತ್ರ ಅತ್ಯಮೂಲ್ಯವಾದದ್ದು ಎಂದು ತಿಳಿಸಿದರು.

ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿಡ್ಲೆ ಕ್ಲಸ್ಟರ್ ನ ಅನುಭವಿ ಸಿ. ಆರ್. ಪಿ. ಪ್ರತಿಮಾರವರು ಎಫ಼್ ಎಲ್ ಎನ್ ಕಾರ್ಯಕ್ರಮದ ಉದ್ದೇಶ ಮತ್ತು ಅನುಷ್ಠಾನದ ಬಗ್ಗೆ ಬೆಳಕು ಚೆಲ್ಲಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೆಪೇಟೆಯ ಸಹ ಶಿಕ್ಷಕ ಗಣೇಶ್ ಅವರು ಎಫ಼್ ಎಲ್ ಎನ್ ಬೋಧನಾ ವಿಧಾನಗಳ ಕುರಿತು ಮಾಹಿತಿ ನೀಡಿದರು.

ಹಾಗೆಯೇ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡುಜಾರು ಇಲ್ಲಿಯ ಸಹ ಶಿಕ್ಷಕಿ ಉಮಾರವರು ಎಫ಼್ ಎಲ್ ಎನ್ ಚಟುವಟಿಕೆಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ ಎಲ್ಲಾ ಶಿಕ್ಷಕರಿಗೂ ಯಶಸ್ವಿ ಕಾರ್ಯಾಗಾರಕ್ಕಾಗಿ ಶುಭ ಹಾರೈಸಿದರು. ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಂಶುಪಾಲ ಮನಮೋಹನ್ ನಾಯಕ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಹಶಿಕ್ಷಕಿ ಆಶಾ ಮತ್ತು ತಂಡದವರ ಸುಮಧುರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಮುಖ್ಯೋಪದ್ಯಾಯಿನಿ ಪರಿಮಳ ಎಂ. ವಿ.ಯವರು ಸ್ವಾಗತಿಸಿದರು. ಈ ಕಾರ್ಯಾಗಾರವು ಶಿಕ್ಷಕರಿಗೆ ಎಫ಼್ ಎಲ್ ಎನ್ ಕುರಿತು ಅಮೂಲ್ಯವಾದ ಮಾಹಿತಿಯನ್ನು ನೀಡಿತು ಮತ್ತು ಬೋಧನಾ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಯಿತು ಎಂದು ಶಿಕ್ಷಕರು ಅಭಿಪ್ರಾಯಪಟ್ಟರು. ಕಾರ್ಯಾಗಾರದ ಕೊನೆಯಲ್ಲಿ ಸಹಶಿಕ್ಷಕಿ ಶೀಭಾ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here