ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ವಾರ್ಷಿಕ ಮಹಾಸಭೆ, ನೂತನ ನಿರ್ದೇಶಕರ ಪದಗ್ರಹಣ ಮತ್ತು 2025ರ ಸಾಧಕರಿಗೆ ಸನ್ಮಾನ

0

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ವಾರ್ಷಿಕ ಮಹಾಸಭೆ, ನೂತನ ನಿರ್ದೇಶಕರ ಪದಗ್ರಹಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಎ. 11ರಂದು ಎಸ್.ಡಿ. ಎಂ. ಆಂಗ್ಲ ಮಾಧ್ಯಮ ಬೆಳ್ತಂಗಡಿಯ ಶಾಲಾ ಸಭಾಭವನದಲ್ಲಿ ನಡೆಯಿತು.

ಬೆಳ್ತಂಗಡಿ ತಾಲೂಕು ದಂಡಾಧಿಕಾರಿ ಪೃಥ್ವಿ ಸಾನಿಕಂರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ಅಧ್ಯಕ್ಷ ಜಯರಾಜ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವರದಿ ವಾಚನ ಮತ್ತು ಪ್ರಾಸ್ತಾವಿಕ ನುಡಿಯನ್ನು ನೆರವೇರಿಸಿದರು. 44 ನಿರ್ದೇಶಕರ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿ ಭವಾನಿ ಶಂಕರ್, ರಾಜ್ಯ ಸರಕಾರಿ ನೌಕರರ ಸಂಘ ಮಂಗಳೂರಿನ ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್., ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಬಕ್ಕಪ್ಪ ಹೆಚ್., ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್., ತಾ. ಆರೋಗ್ಯಾಧಿಕಾರಿ ಡಾ. ಸಂಜಾತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರೀಯಾ ಆಗ್ನೇಸ್, ಪ. ಪಂ. ಮುಖ್ಯ ಅಧಿಕಾರಿ ರಾಜೇಶ್ ಕೆ., ಎಸ್. ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಲತಾ ಎಮ್. ಆರ್., ರಾಜ್ಯ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಅಮಿತಾನಂದ ಹೆಗ್ಡೆ, ರಾಜ್ಯ ಪರಿಷತ್‌ ಸದಸ್ಯ ಪ್ರದೀಪ್ ಕುಮಾರ್ ಪಿ., ಕೋಶಾಧಿಕಾರಿ ಶೆಟ್ಟಿ ನಾರಾಯಣ ಸಂಜೀವ, ಸಂಚಾಲಕ ಆನಂದ ಡಿ., ಹಿರಿಯ ಉಪಾಧ್ಯಕ್ಷೆ ಗಾಯತ್ರಿ ಪಿ, ಚಂದ್ರಶೇಖರ, ಪದಾಧಿಕಾರಿಗಳು, ಮತ್ತು ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

ಈ ವೇಳೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪುಷ್ಪಲತಾ ಜೈನ್, ಫಕೀರ, ಶೀನಪ್ಪ ಪೂಜಾರಿ, ಜಿನ್ನಪ್ಪ ಪೂಜಾರಿ, ರತ್ನಾವತಿ, ಹಾಗೂ ಶಿಕ್ಷಣ ಇಲಾಖೆಯಲ್ಲಿ ಸಾಧನೆ ಮಾಡಿದ ವಿ.ಕೆ ವಿಟ್ಲ ಮೋಹನ್ ಬಾಬು, ಮಂಜುನಾಥ, ಕರಿಯಪ್ಪ, ಮಾಸ್ಟರ್ ಚಿನ್ಮಯ್, ಕು। ತನುಶ್ರೀ, ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೇಮಚಂದ್ರ, ಕವನ್, ಅಕ್ಕಮ್ಮ, ಪದ್ಮಪ್ರಿಯ, ಚೇತನಾ, ಸೌಮ್ಯ, ಪೃಥ್ವಿರಾಜ್, ಜಯಾನಂದ ಇವರನ್ನು ಸನ್ಮಾನಿಸಲಾಯಿತು.

ಅಂತರಿಕ ಲೆಕ್ಕಪರಿಶೋಧಕರು ಗಂಗಾರಾಣಿ ನಾ. ಜೋಶಿ ಮತ್ತು ರತ್ನಾವತಿ ಪ್ರಾರ್ಥಿಸಿ, ಕಾರ್ಯದರ್ಶಿ ವಿಕಾಶ್ ಕುಮಾರ್ ಪೈ ಸ್ವಾಗತಿಸಿ, ಜಯರಾಜ್ ಜೈನ್ ವರದಿ ವಾಚಿಸಿ ಪ್ರಾಸ್ತಾವಿಸಿದರು. ಶೆಟ್ಟಿ ನಾರಾಯಣ ಸಂಜೀವ ಲೆಕ್ಕಪತ್ರ ಮಂಡಿಸಿದರು. ಅಮಿತಾನಂದ ಹೆಗ್ಡೆ ವಂದಿಸಿದರು. ಪೆರ್ಲ ಬೈಪಾಡಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಮಹೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here