

ಬೆಳ್ತಂಗಡಿ: ಸವಣಾಲು ಅಂಗನವಾಡಿಯಲ್ಲಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ಎ. 10ರಂದು ನಡೆಯಿತು. ಮಕ್ಕಳ ಪೋಷಕರಾದ ಅರುಣ್ ಆಚಾರ್ಯ ಮತ್ತು ಸಹನಾರವರು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಶುಭ ಹಾರೈಸಿ ಸಿಹಿ ತಿಂಡಿ ವಿತರಿಸಿದರು.
ಸವಣಾಲು ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ, ಗ್ರಾಮ ಆರೋಗ್ಯ ಸಹಾಯಕ ಇಗ್ನೇಷಿಯಸ್, ಆಶಾ ಕಾರ್ಯಕರ್ತೆಯರಾದ ಭಾರತಿ ಮತ್ತು ದಯಾವತಿ, ಅಂಗನವಾಡಿ ಸಹಾಯಕಿ ಹರಿಣಾಕ್ಷಿ, ಹಿರಿಯ ಕೃಷಿಕ ನಾರಾಯಣ ಗೌಡ ಪಚ್ಚೆಂಗಿರಿ ಹಾಗೂ ಪೋಷಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸ್ವಾಗತಿಸಿ, ವಂದಿಸಿದರು.