

ಬೆಳ್ತಂಗಡಿ: ಮಣ್ಣಿನ ಹರಕೆಯ ಖ್ಯಾತಿಯ ನಡ ಗ್ರಾಮದ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಕಾರ್ಯಕ್ರಮಗಳು ಏ. 7ರಿಂದ 11ರವರೆಗೆ ನಡೆಯುವ ವಾರ್ಷಿಕ ಜಾತ್ರೆಗೆ ಏ. 7ರಂದು ಧ್ವಜಾರೋಹಣ ಮುಖಾಂತರ ಪ್ರಾರಂಭಗೊಂಡಿತು. ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ ಮೊದಲಾದ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಡಾ.ಸತೀಶ್ಚಂದ್ರ ಸುರ್ಯಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಅಜ್ರಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಏ.8ರಂದು ಮಧ್ಯಾಹ್ನ 12.30ರಿಂದ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ, ಸಂಜೆ 6ರಿಂದ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ಹೊರಡುವುದು, ರಾತ್ರಿ 8 ರಿಂದ ಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 9.30ರಿಂದ ದೇವದಾಸ್ ಕಾಪಿಕಾಡ್ ತಂಡದ ‘ಎರ್ಲಾ ಗ್ಯಾರಂಟಿ ಅತ್ತ್ ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ ನಡೆಯಲಿದೆ.