

ಬೆಳ್ತಂಗಡಿ: ತಾಲೂಕಿನ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಯಲ್ಲಿ ಬರುವ ನ್ಯಾಯ ತರ್ಪು ಗ್ರಾಮದಬೂತ್ ಸಂಖ್ಯೆ 179ಕ್ಕೆ ಅಧ್ಯಕ್ಷರಾಗಿ ಅಸಿಫ್ ಪಲ್ಲಾದೆ ಮತ್ತು 180ಕ್ಕೆ ಅಧ್ಯಕ್ಷರಾಗಿ ಹರೀಶ್ ನಾಳ ಆಯ್ಕೆಯಾಗಿದ್ದಾರೆ.
ಆಯ್ಕೆ ಪ್ರಕ್ರಿಯೆಯನ್ನು ಕುವೆಟ್ಟು ಜಿಲ್ಲಾ ಪಂಚಾಯತ್ ಉಸ್ತುವಾರಿ ಪ್ರಮೋದ್ ಪೂಜಾರಿ ಮಚ್ಚಿನ ನಡೆಸಿಕೊಟ್ಟಿದ್ದಾರೆ. ಗ್ರಾಮದ ಕಾಂಗ್ರೆಸ್ ನ ಹಿರಿಯರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.