ಗೇರುಕಟ್ಟೆ: ಕಾಂಗ್ರೆಸ್ ಪಕ್ಷದ ಕಳಿಯ ಪಂಚಾಯತ್ ಸಮಿತಿ ಅಧ್ಯಕ್ಷರಾಗಿ ಸತೀಶ್ ನಾಯ್ಕ್ ನಾಳ ಆಯ್ಕೆ

0

ಕಳಿಯ: ಗ್ರಾಮ ಪಂಚಾಯತ್ ನ ಕಳಿಯ ಮತ್ತು ನ್ಯಾಯತರ್ಪು ಗ್ರಾಮದ 5 ಬೂತ್ ನ್ನೊಳಗೊಂಡ ಪಂಚಾಯತ್ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸಿಗ ಕಳಿಯ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಅಡೂರು ಸತೀಶ್ ನಾಯ್ಕ್ ನಾಳ ಆಯ್ಕೆ ಆಗಿದ್ದಾರೆ.

ವೀಕ್ಷಕರಾಗಿ ಪ್ರಮೋದ್ ಕುಮಾರ್ ಮಚ್ಚಿನ ಆಗಮಿಸಿದ್ದರು.
ಹಾಗೂ ಉಪಾದ್ಯಕ್ಷರುಗಳಾಗಿ ಪ್ರದೀಪ್ ಕುಮಾರ್ ಪೇರಾಜೆ, ರಶೀದ್ ಪರಿಮ, ನೇವಿಲ್ ಮೊರಾಸ್ ಪ್ರಧಾನ ಕಾರ್ಯದರ್ಶಿಗಳಾಗಿ ಹರೀಶ್ ಗೌಡ ಕೆರೆಕೋಡಿ, ಶ್ವೇತಾ, ನೌಷದ್ ಜಿ., ಕಾರ್ಯದರ್ಶಿಗಳಾಗಿ ಪುಷ್ಪಾ ಎಸ್. ನಾಯ್ಕ,ಸುಮಲತಾ ಬಟ್ಟೆಮಾರು, ನಾಸಿರ್ ನಡತೊಟ್ಟು ಆಯ್ಕೆಯಾದರು.

ಬೂತ್ ಸಮಿತಿಯ ಅಧ್ಯಕ್ಷರುಗಳಾಗಿ ಕಳಿಯ ಒಂದನೇ ಬ್ಲಾಕಿಗೆ ರಹಿಮಾನ್ ಮಾಸ್ಟರ್, ಎರಡನೇ ಬ್ಲಾಕಿಗೆ ಸಿದ್ದೀಕ್ ಜಿ. ಹೆಚ್., ಮೂರನೇ ಬ್ಲಾಕಿಗೆ ಸೋಮನಾಥ್ ಇಡ್ಯ ಹಾಗೂ ನ್ಯಾಯತರ್ಪು ಗ್ರಾಮದ ಒಂದನೇ ಬ್ಲಾಕಿಗೆ ಹರೀಶ್ ನಾಳ, ಎರಡನೇ ಬ್ಲಾಕಿಗೆ ಆಸಿಫ್ ಪಳ್ಳಾದೆ ಆಯ್ಕೆಯಾದರು.

ಸಭೆಯು ಪರಪ್ಪು ನೇವಿಲ್ ಮೊರಾಸ್ ಮನೆಯಲ್ಲಿ ನಡೆಯಿತು. ಸಭೆಯಲ್ಲಿ ಅಬ್ಬುಲ್ ಕರೀಮ್, ರಾಘವ ಹೆ., ಸತೀಶ್ ನಾಯ್ಕ್, ಲತೀಫ್ ಪರಿಮ, ಇಸ್ಮಾಯಿಲ್ ಪಳ್ಳಾದೆ, ನೇವಿಲ್ ಮೊರಾಸ್, ಮರೀಟಾ ಪಿಂಟೋ, ಮೋಹಿನಿ, ಪುಷ್ಪಾ, ಸೋಮನಾಥ ಇಡ್ಯ, ಉಮರಬ್ಬ ಜಾರಿಗೆಬೈಲು, ಬೊಮ್ಮಣ್ಣ ಗೌಡ, ಆಸಿಫ್ ಪಳ್ಳಾದೆ, ರಹಿಮಾನ್ ಮಾಸ್ಟರ್, ಹರೀಶ್ ನಾಳ ಹಾಜರಿದ್ದರು.

LEAVE A REPLY

Please enter your comment!
Please enter your name here