ಪ್ರಸ್ತುತ ವಿದ್ಯಾಮಾನಕ್ಕೆ ಬೇಕಾದ ಕೌಶಲ್ಯವನ್ನು ಕಲಿಯಬೇಕು: ಸಂತೋಷ

0

ಉಜಿರೆ: ಇಂದು ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ ನಮ್ಮ ದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇರುವುದರಿಂದ ಜೀವನದಲ್ಲಿ ಪ್ರಸ್ತುತ ವಿದ್ಯಾಮಾನಕ್ಕೆ ಬೇಕಾದ ಕೌಶಲ್ಯವನ್ನು ಕಲಿಯುವುದರ ಮೂಲಕ ನಮ್ಮ ಯಶಸ್ಸು ಇರುತ್ತದೆ. ಹೊಸ ಹೊಸ ಕ್ಷೇತ್ರದಲ್ಲಿ ಉದ್ಯಮಗಳನ್ನು ಆರಂಭಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಕೆಲವೂಂದು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಲಭವಾಗಿ ಹಣ ಮಾಡುವ ಯೋಜನೆ, ಯೋಚನೆಗಳಿಗೆ ಮಾರು ಹೋಗದೇ, ಸ್ವಯಂ ಶಿಸ್ತು ಅಳವಡಿಸಿಕೊಂಡು ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು.

ಇದಕ್ಕೆ ಪೂರಕವಾಗಿ ನಿಮಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್ ಸೆಟ್ ಸಂಸ್ಥೆಯಲ್ಲಿ ಅತ್ಯುತ್ತಮವಾದ ತರಬೇತಿಯನ್ನು ಪಡೆದುಕೊಂಡಿದ್ದೀರಿ ಅದನ್ನು ಜೀವನದಲ್ಲಿ ಮತ್ತು ಸ್ವ ಉದ್ಯೋಗದಲ್ಲಿ ಉಪಯೋಗಿಸಿಕೊಂಡು ಯಶಸ್ವಿಗಳಿಸಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಶುಂಪಾಲ ಸಂತೋಷ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ ಇಲೆಕ್ಟ್ರಿಕಲ್ ಮೋಟಾರು ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ಸ್ವಾಗತಿಸಿದರು. ಸುಮಾರು 33 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಬ್ರಹಾಂ ಜೇಮ್ಸ್ ವಂದಿಸಿದರು.

LEAVE A REPLY

Please enter your comment!
Please enter your name here