

ಜಾರಿಗೆ ಬೈಲು: ಅಕ್ರಮವಾಗಿ ದನಗಳ ಸಾಗಾಟ ಮಾಡುತ್ತಿದ್ದ ಗಾಡಿಯನ್ನು ಪತ್ತೆ ಹಚ್ಚಿದ ಹಿಂದೂ ಕಾರ್ಯಕರ್ತರು ಚೇಸ್ ಮಾಡಿ ದನಗಳ ರಕ್ಷಣೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಜಾರಿಗೆ ಬೈಲು ಸಮೀಪ ನಡೆದಿದೆ.

ಗುರುವಾಯನಕೆರೆಯಿಂದ ಜಾರಿಗೆಬೈಲು ವರೆಗೆ ಚೇಸ್ ಮಾಡಿದಾಗ ದೋಸ್ತ್ ಗಾಡಿಯಲ್ಲಿ ದನ ಸಾಗಾಟ ಮಾಡುತ್ತಿದ್ದವರು ಗಾಡಿ ಬಿಟ್ಟು ಪರಾರಿಯಾಗಿದ್ದಾರೆ.

ದೋಸ್ತ್ ಗಾಡಿಯಲ್ಲಿ 12 ದನಗಳನ್ನು ತುಂಬಿಸಿ ಸಾಗಿಸಲಾಗುತ್ತಿದ್ದು, ಹಿಂದೂ ಕಾರ್ಯಕರ್ತರು ದನಗಳ ರಕ್ಷಣೆ ಮಾಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ಉಜಿರೆ,ರಾಜೇಶ್ ಗುರುವಾಯನಕೆರೆ, ಜಯಪ್ರಕಾಶ್, ರಕ್ಷಿತ್ ಮದ್ದಡ್ಕ, ಸಂಪತ್ ಪೆರ್ಲ ಮೊದಲಾದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದರು.