

ಬೆಳ್ತಂಗಡಿ: ಜೆ.ಸಿ.ಐ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಬೆಳ್ತಂಗಡಿ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ, ಬ್ಯೂಟಿ ಪಾರ್ಲರ್ ಮಾಲಕೀಯರ ಸಂಘ ಬೆಳ್ತಂಗಡಿ, ಯುವ ವಾಹಿನಿ ಘಟಕ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಮಾ. 31ರಂದು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಬೆಳ್ತಂಗಡಿ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಬೆಳ್ತಂಗಡಿ, ಬ್ಯೂಟಿ ಪಾರ್ಲರ್ ಮಾಲಕಿಯರ ಸಂಘ ಬೆಳ್ತಂಗಡಿ, ಯುವ ವಾಹಿನಿ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಮಹಿಳೆಯರಿಗಾಗಿ ಲೈಫ್ ಬ್ಯಾಲೆನ್ಸ್ ಮತ್ತು ಸ್ಟ್ರೆಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ತರಬೇತಿ ಕಾರ್ಯಗಾರ ನಡೆಯಿತು.

ಈ ತರಬೇತಿ ಕಾರ್ಯಗಾರವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯೆ ಡಾ. ತಾರಕೇಶ್ವರಿ ವಿ. ಶೆಟ್ಟಿಯವರು ಉದ್ಘಾಟಿಸಿ ಮಹಿಳಾ ದಿನಾಚರಣೆಯ ವಿಶೇಷತೆ ಹಾಗೂ ಮಹಿಳೆಯ ಶಕ್ತಿ ದಿಟ್ಟತನದ ಬಗ್ಗೆ ಮಾತಾಡಿ ಜೆಸಿಐ ಈ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಜೆಸಿಐ ರಾಷ್ಟ್ರೀಯ ತರಬೇತುದಾರೆ ಹಾಗೂ ವಲಯದ ತರಬೇತಿ ವಿಭಾಗದ ನಿರ್ದೇಶಕಿಯಾದ ಮಂಗಳೂರಿನ ಜೇಸಿ ಅಕ್ಷತಾ ಶೆಟ್ಟಿ ಇವರು ತರಬೇತಿ ಚಟುವಟಿಕೆಗಳೊಂದಿಗೆ ದೈನಂದಿನ ಬದುಕಿನ ಒತ್ತಡ ಮತ್ತು ಮಕ್ಕಳು ಸಂಸಾರ ಹಾಗೂ ವ್ಯವಹಾರವನ್ನು ಸರಳವಾಗಿ ನಿಭಾಯಿಸುವುದರ ಬಗ್ಗೆ ಸುದೀರ್ಘ ತರಬೇತಿ ನೀಡಿದರು.
ಜೆಸಿ ಬೆಳ್ತಂಗಡಿಯ ಅಧ್ಯಕ್ಷೆ ಜೆಸಿ ಆಶಾಲತಾ ಪ್ರಶಾಂತ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ, ಸಭೆಗೆ ಸ್ವಾಗತ ಕೋರಿದರು. ವೇದಿಕೆಯಲ್ಲಿ ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷ ಘಟಕದ ನಿಕಟ ಪೂರ್ವ ಅಧ್ಯಕ್ಷ ಜೆಸಿ ರಂಜಿತ್ ಹೆಚ್. ಡಿ., ತಾಲೂಕು ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ್ ಹಾಗೂ ಬ್ಯೂಟಿ ಪಾರ್ಲರ್ ಮಾಲಕಿಯರ ಸಂಘ ಇದರ ಅಧ್ಯಕ್ಷೆ ರಶ್ಮಿತಾ ಆಳ್ವ, ಯುವ ವಾಹಿನಿ ಇದರ ಅಧ್ಯಕ್ಷ ಗುರುರಾಜ ಪೂಜಾರಿ ಗುರಿಪಳ್ಳ, ಎಲ್ಲಾ ಸಂಘಟನೆಗಳ ಸದಸ್ಯರು, ಪೂರ್ವ ಅಧ್ಯಕ್ಷರು ಉಪಸ್ಥಿತರಿದ್ದರು. ಜೆಸಿ ಹೇಮಾವತಿ ಕೆ. ವೇದಿಕೆ ಆಹ್ವಾನಿಸಿ, ಕಾರ್ಯಕ್ರಮ ಸಂಯೋಜಕಿ ಪವಿತ್ರ ಚಿದಾನಂದ ವಂದಿಸಿದರು.