

ಅರಸಿನಮಕ್ಕಿ: “ನವಭಾರತ” ಸಂಘಟನೆಯ ಆಶ್ರಯದಲ್ಲಿ ಏ. 10ರಿಂದ 13ರವರೆಗೆ ನಡೆಯುವ ಮಕ್ಕಳ ಸಂಸ್ಕಾರ ಶಿಬಿರದ ಮಾಹಿತಿ ಕರಪತ್ರವನ್ನು ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ವನದುರ್ಗಾ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಅರಸಿನಮಕ್ಕಿ ಗ್ರಾ. ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್., ಉದ್ಯಮಿ ಶ್ರೀರಂಗ ದಾಮ್ಮೆ ಅರಸಿನಮಕ್ಕಿ, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ, ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ಹೊಸ್ತೋಟ, ಟ್ರಸ್ಟ್ ಸದಸ್ಯ ಬಾಲಕೃಷ್ಣ ರೈ ಮುದ್ದಿಗೆ, ಬಿಜೆಪಿ ಶಕ್ತಿಕೇಂದ್ರದ ಪ್ರಮುಖ್ ಜಯಪ್ರಸಾದ್ ಶೆಟ್ಟಿಗಾರ್, ಆರ್. ಆರ್. ಎಸ್. ಸ್ವಯಂ ಸೇವಕರಾದ ಯೋಗೀಶ್ ಕುಮಾರ್, ಅರ್ಚಕ ಉಲ್ಲಾಸ್ ಭಟ್, ವೃಷಾಂಕ್ ಖಾಡಿಲ್ಕಾರ್, ಕೃಷ್ಣ ಮೂರ್ತಿ ಪಿಲಿಕ್ಕಬೆ, ಗೋಪಾಲ ಆಚಾರ್ಯ, ಮೊದಲಾದವರು ಉಪಸ್ಥಿತರಿದ್ದರು.