

ಗುರುವಾಯನಕೆರೆ: ಪನೇಜಲ್ ನಲ್ಲಿ ಏ. 15ರಂದು ಭಂಡಾರಿ ಸಮಾಜದ ಸಂಘದ ಆವರಣದಲ್ಲಿ ನಡೆಯುವ ವಾರ್ಷಿಕೋತ್ಸವ ಹಾಗೂ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲ್ಲೂಕು ಭಂಡಾರಿ ಸಮಾಜದ ಗೌರವ ಅಧ್ಯಕ್ಷ ಎ. ಪೂವಪ್ಪ ಭಂಡಾರಿ ಪನೇಜಲು, ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಉಮೇಶ್ ಉಜಿರೆ, ಕಾರ್ಯದರ್ಶಿ ಅಶೋಕ್
ಭಂಡಾರಿ ಗುಂಡ್ಯಳಿಕೆ, ಯುವ ವೇದಿಕೆ ಅಧ್ಯಕ್ಷ ವಿಶ್ವನಾಥ್ ಭಂಡಾರಿ ಉಜಿರೆ, ಉಪಾಧ್ಯಕ್ಷ ಬಾಲಕೃಷ್ಣ ಭಂಡಾರಿ ಮಡಂತ್ಯಾರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೂವಪ್ಪ ಭಂಡಾರಿ ಮದ್ದಡ್ಕ, ಸಂಜೀವ ಭಂಡಾರಿ ಉಜಿರೆ, ನೇಮು ಭಂಡಾರಿ ಪನೇಜಲು, ಸದಾಶಿವ ಭಂಡಾರಿ ವೇಣೂರು, ಕೇಶವ ಭಂಡಾರಿ ಬೆಳ್ತಂಗಡಿ, ಚಂದ್ರ ಭಂಡಾರಿ ಗುರುವಾಯನಕೆರೆ, ನಾರಾಯಣ ಭಂಡಾರಿ ಕುಂಡದಬೆಟ್ಟು ಉಪಸ್ಥಿತರಿದ್ದರು. ಸತೀಶ್ ಭಂಡಾರಿ ನಾಳ ಧನ್ಯವಾದವಿತ್ತರರು.