

ಧರ್ಮಸ್ಥಳ: ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಸಮೀಪ ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ.19ರಂದು ಮಧ್ಯರಾತ್ರಿ ನಡೆದಿದೆ. ತಕ್ಷಣ ತಿಳಿದ ಉಜಿರೆ ಧನ್ವಿ ಆಂಬುಲೆನ್ಸ್ ಸಹಾಯದಿಂದ ಪ್ರಥಮ ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಜನಪ್ರಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಘಟನೆಯ ವಿವರ: ಹಾಸನದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಪಲ್ಸರ್ ಬೈಕ್ ಸವಾರ ಮಂಜುನಾಥ್ ಹಾಗೂ ಉಜಿರೆಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿಜಯಾನಂದ ಬಸ್ ನಡುವೆ ಅಪಘಾತ ಸಂಭವಿಸಿದೆ. ಬೈಕ್ ಸಂಪೂರ್ಣ ಹಾನಿಯಾಗಿದ್ದು ಸವಾರ ಗಂಭೀರ ಗಾಯವಾಗಿದೆ.

ಧನ್ವಿ ಅಂಬುಲೆನ್ಸ್ ನ ಮಾಲಕ ಬೈಕ್ ಸವಾರ ಮೊಬೈಲ್ ತೆಗೆದುಕೊಂಡು ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ ದೈರ್ಯ ತುಂಬಿ ಕರೆದುಕೊಂಡು ಬರುವುದಾಗಿ ಭರವಸೆ ನೀಡಿದ್ದಾರೆ. ಇವರ ಜೊತೆ ಶೌರ್ಯ ವಿಪತ್ತು ತಂಡದ ಸದಸ್ಯ ಅವಿನಾಶ್ ಸಾಥ್ ನೀಡಿದ್ದಾರೆ.