

ಉಜಿರೆ: ಮಾ. 20ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ಆಯೋಜಿಸಿದ ಐಕ್ಸ್ (Association of ICSE and CBSE Schools) ದ್ವಿಮಾಸಿಕ ಸಭೆ ಉಜಿರೆಯ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡದ ವಿವಿಧ ಐ.ಸಿ.ಎಸ್.ಇ ಹಾಗೂ ಸಿ.ಬಿ.ಎಸ್.ಇ ಶಾಲೆಯ ಪ್ರಾಂಶುಪಾಲರು ಭಾಗಿಯಾಗಿದ್ದು, ಐಕ್ಸ್ ಸಮಿತಿಯ ಮಾಹಿತಿಯನ್ನೊಳಗೊಂಡ ‘ರೆಡ್ ಬುಕ್’ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಪ್ರಾಂಶುಪಾಲ ಹಾಗೂ ಐಕ್ಸ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮನ್ಮೋಹನ್ ನಾಯ್ಕ್ ಕೆ.ಜಿ., ಉಡುಪಿಯ ಆನಂದತೀರ್ಥ ವಿದ್ಯಾಲಯದ ಪ್ರಾಂಶುಪಾಲೆ ಹಾಗೂ ಐಕ್ಸ್ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ಡಾ.ಗೀತಾ ಶಶಿಧರ್, ಮಂಗಳೂರಿನ ಸೈಂಟ್ ಡೋಮಿನಿಕ್ ಶಾಲೆಯ ಪ್ರಾಂಶುಪಾಲಕರು ಹಾಗೂ ಐಕ್ಸ್ ಕಾರ್ಯಕಾರಿ ಸಮಿತಿಯ ಮಂಗಳೂರು ವಿಭಾಗದ ಕ್ರೀಡಾ ಕಾರ್ಯದರ್ಶಿ ಫಾದರ್ ಅರುಣ್ ಡಿಸೋಜ ಹಾಗೂ ಉಡುಪಿ ಶಾರದಾ ರೆಸಿಡೆನ್ಸಿಯಲ್ ಶಾಲೆಯ ಪ್ರಾಂಶುಪಾಲ ಹಾಗೂ ಐಕ್ಸ್ ಕಾರ್ಯಕಾರಿ ಸಮಿತಿಯ ಉಡುಪಿ ವಿಭಾಗದ ಕ್ರೀಡಾ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು.