

ಕೊಕ್ಕಡ: ಸ. ಪ. ಪೂ. ಕಾಲೇಜು, ಪ್ರೌಢ ಶಾಲಾ ವಿಭಾಗ ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿ ಮಾ. 18ರಂದು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆಸುವ ರಂಗೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳು ಬಲೂನ್ ಹಾರಿಸುವುದರ ಮೂಲಕ ಉದ್ಘಾಟನೆಗೊಂಡಿತು.
ಈ ಶಿಬಿರದಲ್ಲಿ ಚಿತ್ರಕಲೆ, ಕ್ರಾಫ್ಟ್, ಜನಪದ ನೃತ್ಯ, ಭರತನಾಟ್ಯ, ಮುಖ ವರ್ಣಿಕೆ, ನೃತ್ಯ ಉಡುಪುಗಳ ಬಗ್ಗೆ ತರಬೇತಿ ನೀಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಶಾಲಾ ಮುಖ್ಯ್ಯಶಿಕ್ಷಕಿ ರೀನಾ. ಎಸ್ ವಹಿಸಿದ್ದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ, ನೃತ್ಯಗಳನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಹಾಗೂ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ಅಗತ್ಯಕ್ಕಿಂತ ಹೆಚ್ಚು ಉಪಯೋಗಿಸುತ್ತ ಸಮಯ ವ್ಯರ್ಥ ಮಾಡುತ್ತಿದ್ದು ಇದರಿಂದ ದೂರವಿರಲು ಇಂತಹ ಚಟುವಟಿಕೆಗಳು ಸಹಾಯಕ ಎಂಬ ಹಿತ ನುಡಿಯೊಂದಿಗೆ ಶುಭಹಾರೈಸಿದರು.
ನೃತ್ಯ ತರಬೇತುದಾರಿ ಪೂಜಾ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕಿ ಬೀನಾಸಾಗರ್, ವಿಜ್ಞಾನ ಶಿಕ್ಷಕಿ ರೂಪ, ಗಣಿತ ಶಿಕ್ಷಕ ದಯಾನಂದ ಪಿ. ಡಿ., ಆಂಗ್ಲ ಭಾಷಾ ಶಿಕ್ಷಕ ಪೂರ್ಣೇಶ್, ಅತಿಥಿ ಶಿಕ್ಷಕಿ ದೀಪಿಕಾ, ಪವಿತ್ರ, ಚಿತ್ರಲೇಖಾ ಸಹಕರಿಸಿದರು. ವೃತ್ತಿ ಶಿಕ್ಷಣ ಶಿಕ್ಷಕಿ ನೇತ್ರಾವತಿ ಎ. ಎಸ್. ಕಾರ್ಯಕ್ರಮವನ್ನು ಸಂಘಟಿಸಿದರು. ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.