ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬ ಅವಿನ್ಯ-2025 ಕಾರ್ಯಕ್ರಮದ ಉದ್ಘಾಟನೆಯು ಮಾ. 17ರಂದು ನಡೆಯಿತು. ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಹಬ್ಬವನ್ನು ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಉದ್ಘಾಟಿಸಿ, ಯಶಸ್ವಿ ಜೀವನಕ್ಕೆ ಶಿಕ್ಷಣ ಅತೀ ಮುಖ್ಯ ಎಂದರು.

ಮುಖ್ಯ ಅತಿಥಿಗಳಾಗಿ ಸೂಪರ್ ಹಿಟ್ ದಸ್ಕತ್ ತುಳು ಚಿತ್ರದ ನಿರ್ದೇಶಕ ಅನೀಶ್ ಅಮೀನ್ ವೇಣೂರು ಮಾತನಾಡಿ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಸವಿ ನೆನಪುಗಳಿವೆ ಎಂದರು. ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಕುಶಾಲಪ್ಪ ಎಸ್., ಸಹ ಸಂಯೋಜಕ ರವಿ ಎಂ. ಎನ್., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ವೈಲೆಟ್ ಮೋರಾಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್, ಅವಿನ್ಯ ಸಂಯೋಜಕಿ ಅನನ್ಯ ಎಸ್. ಜೈನ್, ಸಾಂಸ್ಕೃತಿಕ ಸಂಯೋಜಕಿ ಬಿ. ನಯನಾ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪವನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಯುವ ನಿರ್ದೇಶಕ ಅನೀಶ್ ಅಮೀನ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ರೈಹಾನ ಮತ್ತು ಪ್ರತೀಕ್ ಕಾರ್ಯಕ್ರಮ ನಿರೂಪಿಸಿದರು. ಸ್ಪೂಡೆಂಟ್ ವೆಲ್ವೆರ್ ಆಫೀಸರ್ ಪ್ರೋ. ಪದ್ಮನಾಭ ಕೆ. ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಿವೇದಿತಾ ವಂದಿಸಿದರು.