ನಾರಾವಿ: ಶ್ರಿ ಸೂರ್ಯ ನಾರಾಯಣ ದೇವಸ್ಥಾನ ಜಾತ್ರೆಗೆ ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೈತೋಟದಲ್ಲಿ ಬೆಳೆದ ತರಕಾರಿ, ತೆಂಗಿನಕಾಯಿ, ಸೀಯಾಳ, ಬಾಳೆಗೊನೆ ಹಾಗೂ ಬಾಳೆಎಲೆಯನ್ನು ಮಾ. 15ರಂದು ಸಮರ್ಪಣೆ ಮಾಡಲಾಯಿತು.
ನಾರಾವಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕುತ್ಲೂರು ಶಾಲೆಗೆ ಕೈತೋಟ ಮಾಡಲು 50 ಸಾವಿರ, ಬ್ಯಾಂಕಿನ ಕಾರ್ಯನಿರ್ವಾಹಣಾಧಿಕಾರಿ ಶಶಿಕಾಂತ ಜೈನ್ ರವರು ತೋಟ ನಿರ್ವಹಣೆ ಮಾಡಲು 5 ವರ್ಷದಿಂದ ತಲಾ 5 ಸಾವಿರ ರೂ. ಹಾಗೂ ಬೆಳ್ತಂಗಡಿ ನೋಟರಿ ವಕೀಲರಾದ ಮುರಳಿ.ಬಿ.ಯವರು ಪ್ರತೀ ವರ್ಷವು ಉಚಿತವಾಗಿ ಮಕ್ಕಳಿಗೆ ನೋಟ್ ಪುಸ್ತಕ ನೀಡಿದ್ದಕ್ಕಾಗಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಮಚಂದ್ರ ಭಟ್ ಕುಕ್ಕುಜೆ ಶ್ಲಾಘನೆ ವ್ಯಕ್ತಪಡಿಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ರಾಮಚಂದ್ರ ಭಟ್ ಕುಕ್ಕುಜೆ, ಉಪಾಧ್ಯಕ್ಷೆ ಶ್ವೇತಾ ಜಗದೀಶ್, ಶ್ರಿ ಸೂರ್ಯ ನಾರಾಯಣ ದೇವಸ್ಥಾನ ಆಡಳಿತ ಮಂಡಳಿಯ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಸಹ ಮೊಕ್ತೇಸರರಾದ ದಿವಾಕರ ಭಂಡಾರಿ, ನಿತ್ಯಾನಂದ ಪೂಜಾರಿ, ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಕೃಷ್ಣಪ್ಪ ಪೂಜಾರಿ, ಕುತ್ಲೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷರಾದ ತುಂಗಪ್ಪ ಪೂಜಾರಿ, ಪ್ರವೀಣ್ ಎಮ್.ಕೆ., ಶಾಲೆಯ ಅಧ್ಯಾಪಕ ರಾಜು ಕಾಶಪ್ಪನವರ್, ಶಾಲೆಯ ವಿದ್ಯಾರ್ಥಿಗಳಾದ ಚಿರಂಜೀವಿ, ಸಂಜಯ್, ಶೃತನ್, ಅವಿಶ್, ಹೃಷಿಕ್, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.